ಛತ್ತೀಸ್ ಗಢದ ಭಿಲಾಯ್ ನಲ್ಲಿ ಮೊಬೈಲ್ ಫೋನ್ ನಲ್ಲಿ ಗದರ್ -2 ಚಲನಚಿತ್ರವನ್ನು ವೀಕ್ಷಿಸುವಾಗ ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಕ್ಕಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಲ್ಕಿತ್ ಸಿಂಗ್ ಅಲಿಯಾಸ್ ವೀರು (30) ಎಂಬಾತನನ್ನು ಅವರ ಸ್ನೇಹಿತರು ಶುಕ್ರವಾರ ರಾತ್ರಿ ಹತ್ಯೆ ಮಾಡಿದ್ದಾರೆ.ತಸವೂರ್, ಫೈಜಲ್, ಶುಭಂ ಲಹರೆ ಅಲಿಯಾಸ್ ಬಬ್ಲು ಮತ್ತು ತರುಣ್ ನಿಷಾದ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪರಾರಿಯಾಗಿದ್ದಾನೆ. ಮಲ್ಕಿತ್ ಅವರ ತಂದೆ ಕುಲವಂತ್ ಸಿಂಗ್ ಖುರ್ಸಿಪರ್ನ ಗುರುದ್ವಾರದ ಮುಖ್ಯಸ್ಥರಾಗಿದ್ದಾರೆ.
ಕೊಲೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ, ಮಲ್ಕಿತ್ ಅವರ ಕುಟುಂಬ ಸದಸ್ಯರು, ಸಿಖ್ ಸಮಾಜದ ಜನರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಖುರ್ಸಿಪರ್ ಪೊಲೀಸ್ ಠಾಣೆಗೆದೌಡಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಮಲ್ಕಿತ್ ಪತ್ನಿಗೆ 50 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಲ್ಕಿತ್ ಅವರನ್ನು ಕ್ರೂರವಾಗಿ ಥಳಿಸಿ ಕೊಲೆ ಮಾಡಲಾಗಿದೆ. ಅವರನ್ನು ತಡರಾತ್ರಿ ರಾಯ್ಪುರದ ರಾಮಕೃಷ್ಣ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ನಿಧನರಾದರು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದುರ್ಗ್ ಎಸ್ಪಿ ಶಲಭ್ ಸಿನ್ಹಾ ತಿಳಿಸಿದ್ದಾರೆ.