ಬೆಂಗಳೂರು: ಮೆಟ್ರೋ ಪ್ರಯಾಣಿಕನೊಬ್ಬ ರೈಲಿನಲ್ಲಿ ಗೋಬಿ ಮಂಚೂರಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಆತನ ವಿರುದ್ಧ ಪ್ರಕರಣ ದಾಖಲಿಸಿದೆ.
ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಎಂಆರ್ಸಿಎಲ್ ಪ್ರಯಾಣಿಕರಿಗೆ 500 ರೂ.ಗಳ ದಂಡವನ್ನು ವಿಧಿಸಿದೆ.
ರೈಲಿನೊಳಗೆ ಆಹಾರ ಸೇವಿಸಿದ್ದಕ್ಕಾಗಿ ಪ್ರಯಾಣಿಕನೊಬ್ಬನ ವಿರುದ್ಧ ಬಿಎಂಆರ್ಸಿಎಲ್ ಪ್ರಕರಣ ದಾಖಲಿಸಿ ದಂಡ ವಿಧಿಸಿರುವುದು ಇದೇ ಮೊದಲು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ.
ಈ ವ್ಯಕ್ತಿಯು ನಮ್ಮ ಮೆಟ್ರೋದ ಜಯನಗರ ಮತ್ತು ಸಂಪಿಗೆ ರಸ್ತೆ ಪ್ರಯಾಣಿಸಿದ್ದು, ಈ ವೇಳೆ ಗೋಬಿ ತಿಂದಿದ್ದಾನೆ.
ವೀಡಿಯೊದಲ್ಲಿ ಅವನ ಸ್ನೇಹಿತರು ಮೆಟ್ರೋ ಒಳಗೆ ತಿನ್ನದಂತೆ ಎಚ್ಚರಿಕೆ ನೀಡಿದ್ದರೂ ಆದರೆ ಅವನು ತನ್ನ ಸ್ನೇಹಿತರ ಸಲಹೆಯನ್ನು ನಿರ್ಲಕ್ಷಿಸಿ ಹಾಗೆ ಗೋಬಿ ತಿಂದಿದ್ದಾನೆ. ಇದು ನಿಯಮಗಳ ಉಲ್ಲಂಘನೆಯಾಗಿರುವುದರಿಂದ, ಜಯನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ವಿಧಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.