ಚೆಂಗಲ್ಪಟ್ಟು : 27 ವರ್ಷದ ನವವಿವಾಹಿತ ವ್ಯಕ್ತಿಯೊಬ್ಬ ಮೊದಲ ರಾತ್ರಿಯೇ ತನ್ನ ಹೆಂಡತಿಯ ಸೀರೆಯನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮೃತನನ್ನು ರಾಣಿಪೇಟೆ ಮೂಲದ ಸರವಣನ್ ಎಂದು ಗುರುತಿಸಲಾಗಿದ್ದು, ಸುಂಗುವಾಚಟಿರಂನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಚೆಂಗಲ್ಪಟ್ಟು ಬಳಿಯ ದಿಮ್ಮಾವರಂನ ಶ್ವೇತಾ ಅಲಿಯಾಸ್ ರಾಜೇಶ್ವರಿ (21) ಅವರನ್ನು ವಿವಾಹವಾಗಿದ್ದರು.
ಪೊಲೀಸರ ಪ್ರಕಾರ, ಸಂಬಂಧಿಕರಾಗಿದ್ದ ದಂಪತಿಗಳು ಬಾಲ್ಯದಿಂದಲೂ ಸ್ನೇಹಿತರಾಗಿದ್ದರು ಮತ್ತು ಅವರು ಕಳೆದ ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಇತ್ತೀಚೆಗೆ ಇಬ್ಬರೂ ಪೋಷಕರ ಒಪ್ಪಿಗೆಯೊಂದಿಗೆ ಮದುವೆ ನಡೆಯಿತು. ಪೋಷಕರು ಕಳೆದ ಮಂಗಳವಾರ ಮೊದಲ ರಾತ್ರಿ ಕಾರ್ಯಕ್ರ,ಮ ಆಯೋಜಿಸಿದ್ದರು. ಮತ್ತು ಅವರನ್ನು ಚೆಂಗಲ್ಪಟ್ಟು ಬಳಿಯ ದಿಮ್ಮಾವರಂಗೆ ಕರೆದರು.
ಮಂಗಳವಾರ ರಾತ್ರಿ 9 ಗಂಟೆಗೆ ದಂಪತಿಗಳು ತಮ್ಮ ಕೋಣೆಗೆ ಹೋಗಿದ್ದರು ಮತ್ತು ಮರುದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ, ಶ್ವೇತಾ ಕೋಣೆಯಿಂದ ಕಿರುಚುತ್ತಾ ಹೊರಗೆ ಓಡಿ ಬಂದಿದ್ದಾರೆ. ಗಾಬರಿಯಾದ ಆಕೆಯ ಪೋಷಕರು ಕೋಣೆಯೊಳಗೆ ಹೋದಾಗ, ಶ್ವೇತಾ ಅವರ ಮದುವೆಯ ಸೀರೆಗೆ ಸರವಣನ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಗೊತ್ತಾಗಿದೆ. ಸರವಣನ್ ಸಾವು ನಿಗೂಢವಾಗಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ.