ರಾಜಸ್ತಾನದ ಮೆನಾಲ್ ಫಾಲ್ಸ್ ನಲ್ಲಿ ಯುವಕನೊಬ್ಬ ನೀರು ಪಾಲಾಗಿದ್ದಾನೆ. ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಸ್ನೇಹಿತರಿಬ್ಬರಲ್ಲಿ ಒಬ್ಬ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಸ್ನೇಹಿತರು ಹಗ್ಗದ ಸಹಾಯ ಪಡೆದಿದ್ದರು. ಆದ್ರೆ ಯಾವುದೇ ಪ್ರಯೋಜನ ಆಗ್ಲಿಲ್ಲ. ಯುವಕ, 150 ಅಡಿ ನೀರಿಗೆ ಬಿದ್ದಿದ್ದಾನೆ ಎಂದು ವರದಿ ಮಾಡಲಾಗಿದೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಲಪಾತದ ಮೇಲ್ಭಾಗದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಭಿಲ್ವಾರಾ ನಗರದ ಶಾಸ್ತ್ರಿನಗರ ಪ್ರದೇಶದ ನಿವಾಸಿ ಕನ್ಹಯ್ಯಾ ಲಾಲ್ ಎಂಬಾತ ತನ್ನ ಸ್ನೇಹಿತ ಅಕ್ಷತ್ ಜೊತೆ ಫಾಲ್ಸ್ ಗೆ ಹೋಗಿದ್ದರು. ಜಲಪಾತದಲ್ಲಿ ಸ್ನಾನ ಮಾಡುವಾಗ ಇಬ್ಬರೂ ನೀರಿನಲ್ಲಿ ಬಿದ್ರು. ಹಗ್ಗದ ಸಹಾಯದಿಂದ ಒಬ್ಬ ಮೇಲೆ ಬಂದಿದ್ದಾನೆ. ಆದ್ರೆ ಕನ್ಹಯ್ಯಾಲಾಲ್ ಕೈ ಜಾರಿದ್ದು, ಹರಿವಿನ ಪ್ರದೇಶದಲ್ಲಿ ಕೊಚ್ಚಿ ಹೋಗಿದ್ದಾರೆ. ಪೊಲೀಸರು ಮತ್ತು ಈಜು ತಜ್ಞರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆಗಾಲದಲ್ಲಿ ಸಾಹಸದ ಕೆಲಸ ಬೇಡ ಎಂದು ಅಲ್ಲಿನ ತಹಶೀಲ್ದಾರರು ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.