alex Certify ಫುಟ್ ಪಾತ್ ಮೇಲೆ ಕ್ರೀಂ-ಪೌಡರ್ ಮಾರುತ್ತಲೇ ಬಿಲಿಯನೇರ್‌ ಆದ ಮಹಿಳೆ; ಬ್ಯಾಂಕ್ ವಂಚನೆ ಕೇಸ್‌ನಲ್ಲಿ ಮರಣದಂಡನೆಯ ಶಿಕ್ಷೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ ಪಾತ್ ಮೇಲೆ ಕ್ರೀಂ-ಪೌಡರ್ ಮಾರುತ್ತಲೇ ಬಿಲಿಯನೇರ್‌ ಆದ ಮಹಿಳೆ; ಬ್ಯಾಂಕ್ ವಂಚನೆ ಕೇಸ್‌ನಲ್ಲಿ ಮರಣದಂಡನೆಯ ಶಿಕ್ಷೆ….!

ವಿಯೆಟ್ನಾಂನಲ್ಲಿ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿಗೆ ಮರಣದಂಡನೆ ವಿಧಿಸಲಾಗಿದೆ. ಟ್ರೌಂಗ್ ಮೈ ಲ್ಯಾನ್ ಎಂಬ ಈ ಮಹಿಳೆ ಶತಕೋಟಿ ಡಾಲರ್ ಮೌಲ್ಯದ ವಂಚನೆಗಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದು ದೇಶದ ಅತಿದೊಡ್ಡ ಹಣಕಾಸು ವಂಚನೆ ಎಂದು ಹೇಳಲಾಗುತ್ತಿದ್ದು,  ಸುಮಾರು 42,000 ಮಂದಿಯ ಮೇಲೆ ಪರಿಣಾಮ ಬೀರಿದೆ.

ಆರಂಭದಲ್ಲಿ ಈ ಮಹಿಳೆ ತನ್ನ ತಾಯಿಯೊಂದಿಗೆ ಫುಟ್‌ಪಾತ್‌ನಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಳು.  ಅಲ್ಲಿಂದ ಶುರುವಾದ ಪಯಣ ಈಗ ಕೋಟ್ಯಂತರ ಮೌಲ್ಯದ ರಿಯಲ್ ಎಸ್ಟೇಟ್ ಕಂಪನಿ ತಲುಪಿದೆ. ಆದರೆ ವಂಚನೆ ಆರೋಪದ ಮೇಲೆ ವಿಯೆಟ್ನಾಂ ನ್ಯಾಯಾಲಯ ಟ್ರೌಂಗ್‌ಗೆ ಮರಣದಂಡನೆ ವಿಧಿಸಿದೆ. ಆದೇಶದ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಆಕೆ ಹೇಳಿದ್ದಾರೆ.

67 ವರ್ಷದ ಟ್ರೌಂಗ್ ಮೈ ಲ್ಯಾನ್ ಕಳೆದ 11 ವರ್ಷಗಳಿಂದ ದೇಶದ ದೊಡ್ಡ ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದಳು. ಇದಕ್ಕೆ ಸಂಬಂಧಿಸಿದ ಆರೋಪಗಳು ಸಾಬೀತಾದ ನಂತರ ಶಿಕ್ಷೆ ಪ್ರಕಟವಾಗಿದೆ. ಇಂತಹ ಘಟನೆ ನಡೆದಿದ್ದು ವಿಯೆಟ್ನಾಂನಲ್ಲಿ ಇದೇ ಮೊದಲು. ಸದ್ಯ ಟ್ರೌಂಗ್, ವ್ಯಾನ್ ಥಿನ್ ಫ್ಯಾಟ್ ಎಂಬ ರಿಯಲ್‌ ಎಸ್ಟೇಟ್‌ ಕಂಪನಿಯ ಅಧ್ಯಕ್ಷೆ. ಈ ಕಂಪನಿಯು ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು, ಕಚೇರಿಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ನಿರ್ಮಾಣ ಮಾಡುತ್ತದೆ. ಅಕ್ಟೋಬರ್ 2022 ರಲ್ಲಿ, SCB ಬ್ಯಾಂಕ್‌ನಲ್ಲಿ ಹಣಕಾಸಿನ ವಂಚನೆಯ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಯಿತು.

ಹಗರಣದ ಮೊತ್ತ 27 ಬಿಲಿಯನ್ ಡಾಲರ್ ಎಂದು ಬ್ಯಾಂಕ್ ಹೇಳಿದೆ. ವಿಯೆಟ್ನಾಂನ ಸೈಗಾನ್ ಕಮರ್ಷಿಯಲ್ ಬ್ಯಾಂಕ್ 44 ಶತಕೋಟಿ ಡಾಲರ್ ಸಾಲ ಪಡೆದಿರೋದು ಬೆಳಕಿಗೆ ಬಂದಿದೆ. ನ್ಯಾಯಾಲಯವು  27 ಶತಕೋಟಿ ಡಾಲರ್‌ ಅನ್ನು ಹಿಂದಿರುಗಿಸಲು ಆದೇಶಿಸಿತು. ಆದರೆ ಟ್ರೌಂಗ್‌ ಹಣ ವಾಪಸ್‌ ಮಾಡಲೇ ಇಲ್ಲ. ಐದು ವಾರಗಳ ಕಾಲ ನಡೆದ ವಿಚಾರಣೆಯಲ್ಲಿ ಈ ಮಹಿಳೆ 2011 ಮತ್ತು 2022 ರ ನಡುವೆ ಎಸ್‌ಸಿಬಿ ಬ್ಯಾಂಕ್ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿ ತಮ್ಮ ತಪ್ಪುಗಳನ್ನು ಮರೆಮಾಚಿದ್ದಾರೆ. ಲೇನ್ ಮತ್ತು ಆಕೆಯ ಸಹಚರರು ನಕಲಿ ಕಂಪನಿಗಳ ಮೂಲಕ ಶತಕೋಟಿ ಡಾಲರ್ ಮೌಲ್ಯದ ಸಾಲವನ್ನು ಪಡೆದಿದ್ದಾರೆ. ಟ್ರೌಂಗ್‌ ಮೈ ಲ್ಯಾನ್‌ ಅವರದ್ದು ಹೋರಾಟದ ಬದುಕು. ವೀಕ್ಲಿ ಮಾರ್ಕೆಟ್‌ನಲ್ಲಿ ಈಕೆ ತಮ್ಮ ತಾಯಿಯೊಂದಿಗೆ ಸೌಂದರ್ಯ ಉತ್ಪನ್ನಗಳ ಮಳಿಗೆ ತೆರೆಯುತ್ತಿದ್ದರು. 1986 ರಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಆರ್ಥಿಕ ಸುಧಾರಣೆಗಳ ಅವಧಿ ಪ್ರಾರಂಭವಾದಾಗ ಭೂಮಿಯನ್ನು ಖರೀದಿಸಿ ಮಾರಾಟ ಮಾಡಲು ಪ್ರಾರಂಭಿಸಿದರು.

ಕೇವಲ ನಾಲ್ಕೇ ವರ್ಷಗಳಲ್ಲಿ ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಾದರು. 1992 ರಲ್ಲಿ ಕುಟುಂಬದೊಂದಿಗೆ ವ್ಯಾನ್ ಥಿನ್ ಫಾಟ್ (VTP) ಕಂಪನಿಯನ್ನು ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ ಅವರ ಕಂಪನಿಯು ದೇಶದ ಅತಿದೊಡ್ಡ ಮಾರುಕಟ್ಟೆ ಕ್ಯಾಪ್ ಕಂಪನಿಗಳಲ್ಲಿ ಒಂದಾಯಿತು. ಲೇನ್ 1992 ರಲ್ಲಿ ಹಾಂಗ್ ಕಾಂಗ್ ಹೂಡಿಕೆದಾರರನ್ನು ವಿವಾಹವಾದರು. ಇವರ ಹೆಸರು ಎರಿಕ್ ಚು ನಾಪ್, ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...