ಚಾಮರಾಜನಗರ : ಆಶ್ರಯ ಮನೆ ಕೊಡಿಸೋದಾಗಿ ನಂಬಿಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುತ್ರ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೀಲಾಂಭಿಕೆ ಎಂಬುವವರ ಪುತ್ರ ವೈದೇಶ್ ಅತ್ಯಾಚಾರ ಎಸಗಿದ್ದು, ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.
ಗ್ರಾಮ ಪಂಚಾಯತಿಯಿಂದ ಮನೆ ಕಟ್ಟಿಸಿಕೊಡಬೇಕಾದರೆ ತನ್ನ ಜೊತೆ ಲೈಂಗಿಕವಾಗಿ ಸಹಕರಿಸು ಎಂದು ವೈದೇಶ್ ಪದೇ ಪದೇ ಪೀಡಿಸುತ್ತಿದ್ದನು. ಒಂದು ದಿನ ತನ್ನ ಮನೆಗೆ ನುಗ್ಗಿ ತನ್ನನ್ನು ಬೆತ್ತಲೆ ಮಾಡಿ ನಿರಂತರ ಅತ್ಯಾಚಾರ ಎಸಗಿ ವಿಡಿಯೋ ಕೂಡ ಮಾಡಿದ್ದಾನೆ. ಯಾರಿಗಾದರೂ ವಿಚಾರ ತಿಳಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನೊಂದ ಮಹಿಳೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.