ಈಗಿನ ಜೀವನ ಶೈಲಿ ಬದಲಾಗಿದೆ. ಜನರು ಸಮಯದ ಜೊತೆ ಓಡುತ್ತಿದ್ದಾರೆ. ಪದ್ಧತಿ, ಸಂಪ್ರದಾಯಗಳು ಮೂಲೆ ಗುಂಪಾಗಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ತಾ ಇವೆ.
ಮಲಗುವುದರಿಂದ ಹಿಡಿದು ಊಟ, ಪಾಠ ಎಲ್ಲದರಲ್ಲಿಯೂ ನಿಯಮಗಳನ್ನು ಪಾಲಿಸಿದ್ರೆ ಮನಸ್ಸಿನ ಜೊತೆಗೆ ದೇಹವೂ ಉಲ್ಲಾಸವಾಗಿರುತ್ತದೆ. ಆರೋಗ್ಯವಾಗಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಬಯಸುತ್ತೀರೆಂದಾದಲ್ಲಿ ಹಾಸಿಗೆ ಮೇಲೆ ಕುಳಿತು ಹಾಗೂ ಕೈನಲ್ಲಿ ಊಟದ ತಾಟು ಹಿಡಿದು ಭೋಜನ ಮಾಡಬೇಡಿ.
ಭೋಜನ ಮಾಡುವಾಗ ಚಪ್ಪಲಿ ಧರಿಸಬೇಡಿ.
ನಿಂತು ಊಟ ಮಾಡಬೇಡಿ. ನೆಲದ ಮೇಲೆ ಕುಳಿತು ಊಟ ಮಾಡಿ.
ಪ್ರತಿದಿನ ಸ್ನಾನ ಮಾಡಿ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಿ.
ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
ಶಾಂತವಾಗಿ ಊಟ ಮಾಡಿ. ಯಾರನ್ನು ತೆಗಳುವ, ಬೈಯ್ಯುವ ಕೆಲಸ ಮಾಡಬೇಡಿ.
ಅಡುಗೆ ಸಿದ್ಧಪಡಿಸುವ ಮೊದಲು ಇಷ್ಟ ದೇವರನ್ನು ಪ್ರಾರ್ಥಿಸಿ.
ಊಟ ಮಾಡುವ ಮುನ್ನ ಅನ್ನಪೂರ್ಣ ದೇವಿಯನ್ನು ನೆನೆದು ನಂತ್ರ ಊಟ ಮಾಡಿ.