ಲೈಂಗಿಕ ಚಟುವಟಿಕೆಯಿಂದ ದೇಹಕ್ಕೆ ವ್ಯಾಯಾಮವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಆದ್ರೆ ಕೆಲವರ ವಿಷಯದಲ್ಲಿ ಇದು ಸುಳ್ಳಾಗಬಹುದು. ಇದಕ್ಕೆ ಮಹಿಳೆಯೊಬ್ಬಳು ಆನ್ ಲೈನ್ ವೆಬ್ ಸೈಟ್ ರೆಡಿಟ್ ನಲ್ಲಿ ಹಂಚಿಕೊಂಡ ಅನುಭವವೇ ಸಾಕ್ಷಿ.
ಮಹಿಳೆ, ಪಾರ್ಟಿಯಲ್ಲಿ ಸಿಕ್ಕ ಸಾಮಾಜಿಕ ಜಾಲತಾಣದ ಗೆಳೆಯನ ಜೊತೆ ರೂಮ್ ಗೆ ಹೋಗಿದ್ದಳಂತೆ. ಲೈಂಗಿಕ ಕ್ರಿಯೆಯ ನಂತರ ಆಕೆಗೆ ಹೃದಯದಲ್ಲಿ ನೋವು ಶುರುವಾಯ್ತಂತೆ. ಉಸಿರಾಡಲು ತೊಂದರೆಯಾಯ್ತಂತೆ. ತಲೆ ಕೂಡ ಸುತ್ತಲು ಶುರುವಾಗಿತ್ತಂತೆ. ಆಕೆ ಕೆಲ ಸಮಯ ವಿಶ್ರಾಂತಿ ಪಡೆದಳಂತೆ. ನಂತ್ರ ಹೃದಯದ ನೋವು ಕಡಿಮೆಯಾದ ಕಾರಣ, ನಿದ್ರೆಗೆ ಜಾರಿದ್ದಳಂತೆ.
ಬೆತ್ತಲೆ ಪೂಜೆಗೆ ಒಪ್ಪದ ಪತ್ನಿ, ನಿಧಿ ಆಸೆಗೆ ಕೂಲಿಕಾರ್ಮಿಕ ಮಹಿಳೆಯ ಬೆತ್ತಲೆ ಪೂಜೆ; 6 ಮಂದಿ ಆರೆಸ್ಟ್
ಘಟನೆಗೆ ಒಂದು ತಿಂಗಳು ಮೊದಲು ಇಸಿಜಿ ಮಾಡಿಸಿದ್ದೆ ಎನ್ನುವ ಮಹಿಳೆ, ಮರು ದಿನ ವೈದ್ಯರನ್ನು ಭೇಟಿಯಾದಳಂತೆ. ವೈದ್ಯರು ಹೃದ್ರೋಗ ತಜ್ಞರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ರಂತೆ. ತಕ್ಷಣ ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ತೆಗೆದುಕೊಂಡೆ ಎಂದು ಮಹಿಳೆ ಹೇಳಿದ್ದಾಳೆ.
ಮಹಿಳೆ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ತಜ್ಞರ ಪ್ರಕಾರ, ಹೃದಯಸಂಬಂಧಿ ಖಾಯಿಲೆಯಿರುವವರಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಹೃದಯಾಘಾತವಾಗುವುದು ಸಾಮಾನ್ಯ. ಹಾಗಾಗಿ ಹೃದಯದ ತೊಂದರೆ ಇರುವವರು ಸಣ್ಣ ಸಣ್ಣ ತೊಂದರೆಗಳನ್ನು ಕೂಡ ನಿರ್ಲಕ್ಷಿಸಬಾರದು. ಹಾಗೆಯೇ ಯಾವ ಖಾಯಿಲೆಗೆ ಯಾವ ರೀತಿಯ ಔಷಧಿ ತೆಗೆದುಕೊಳ್ಳುತ್ತಿದ್ದೀರಾ? ಅದು ನಿಮ್ಮ ಆರೋಗ್ಯದ ಮೇಲೆ ಹೇಗೆ ಅಡ್ಡಪರಿಣಾಮ ಬೀರಬಹುದು ಎಂಬುದು ಕೂಡ ತಿಳಿಯಬೇಕು.