ದುಬೈನ ಕೋರ್ಟ್ ಒಂದು 40 ವರ್ಷದ ಮಹಿಳೆಗೆ 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಪತ್ನಿ, ಪತಿ ಜೊತೆ ನಡೆಸಿದ ಸಂದೇಶದ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ ಇದಕ್ಕೆ ಕಾರಣವಾಗಿದೆ.
ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿಯಿಂದಲೇ ಘೋರ ಕೃತ್ಯ, ವಿಚಾರಣೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ
ಈ ವರ್ಷ ಜನವರಿಯಲ್ಲಿ ಪತಿ ಹಾಗೂ ಆಕೆಯ ಸಂದೇಶದ ಫೋಟೋ ಹಾಗೂ ಪತಿ ನಂಬರ್ ಇನ್ಸ್ಟಾಗ್ರಾಮ್ ಗೆ ಹಾಕಿದ್ದಳು. ಮಗುವಿನ ಫೋಟೋವನ್ನೂ ಆಕೆ ಇನ್ಸ್ಟಾಗೆ ಹಾಕಿದ್ದಳು. ಇದ್ರ ವಿರುದ್ಧ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಗೌಪ್ಯತೆಗೆ ಅಡ್ಡಿಯಾಗಿದೆ ಎಂದು ದೂರಿದ್ದ. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸುವ ವೇಳೆ ಮಹಿಳೆ, ಇದನ್ನು ನಿರಾಕರಿಸಿದ್ದಳು. ಅಪ್ಲಿಕೇಶನ್ ಬಳಕೆ ವೇಳೆ ಈ ಯಡವಟ್ಟಾಗಿದೆ ಎಂದಿದ್ದಳು. ಆದ್ರೆ ಕೊನೆಯಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದಳು.
ವಿಚಾರಣೆ ಪೂರ್ಣಗೊಳಿಸಿದ ದುಬೈ ಕೋರ್ಟ್, ಮಹಿಳೆಗೆ ದಂಡ ವಿಧಿಸಿದೆ. 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದಲ್ಲದೆ ಪ್ರಕರಣದ ಹೆಚ್ಚುವರಿ ವಿಚಾರಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ.