ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಮಹಿಳೆಯೊಬ್ಬಳು ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಸ್ನೇಹಿತರೊಂದಿಗೆ ಪ್ಲಾಟ್ಫಾರ್ಮ್ ನಡೆಯುತ್ತಿರುವುದನ್ನು ನೋಡಬಹುದು.
ಮಾತನಾಡುತ್ತಾ ಹೋಗುತ್ತಿದ್ದ ಮಹಿಳೆ ರೈಲು ಬರುವುದನ್ನು ಗಮನಿಸದೇ ಹಳಿ ದಾಟಲು ಹೋಗಿದ್ದಾಳೆ. ಅಷ್ಟರಲ್ಲಿ ರೈಲು ಮಹಿಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಮತ್ತು ಮಗು ಇಬ್ಬರನ್ನೂ ಪ್ಲಾಟ್ ಫಾರ್ಮ್ ನ ಬದಿಗೆ ಹಾರಿ ಬೀಳುತ್ತಾರೆ. ಮಹಿಳೆ ಮತ್ತು ಮಗುವಿನ ಸ್ಥಿತಿ ಇನ್ನೂ ತಿಳಿದಿಲ್ಲ, ಭಯಾನಕ ಘಟನೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ.