ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯ ನೇರಳಪಲ್ಲಿಯಲ್ಲಿ ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 50 ವರ್ಷದ ನೀಲಮ್ಮ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ.
ಊಟದ ಬಳಿಕ ನೀಲಮ್ಮ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದು, ಅದು ನೇರವಾಗಿ ಗಂಟಲಿನ ಮುಂಭಾಗಕ್ಕೆ ಸಿಲುಕಿದೆ. ಇದರಿಂದಾಗಿ ಉಸಿರಾಡಲು ತೊಂದರೆಯಾಗಿದ್ದು, ಉಸಿರುಕಟ್ಟಿ ನೀಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.