ಮೈಸೂರು: ಗಂಡನ ಮನೆಯವರ ಹಿಂಸೆ, ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ ನಡೆದಿದೆ.
ಜ್ಯೋತಿ (22) ಆತ್ಮಹತ್ಯೆಗೆ ಶರಣಾದ ಮಹಿಳೆ. ನಾಲ್ಕು ವರ್ಷಗಳ ಹಿಂದೆ ಜ್ಯೋತಿ ಮಚ್ಚೂರು ಗ್ರಾಮದ ಆನಂದ್ ಎಂಬುವವರನ್ನು ವಿವಾಹವಾಗಿದ್ದಳು. ಮದುವೆಯಾದಾಗಿನಿಂದ ಪತಿ ಹಾಗೂ ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು.
ವರ್ಷಕಳೆದಂತೆ ವರದಕ್ಷಿಣೆ ತರದಿದ್ದರೆ ತವರು ಮನೆಯವರನ್ನು ನೀಡಲು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದರು. ಅಲ್ಲದೇ ಜ್ಯೋತಿ ತಂದೆ-ತಾಯಿ ಮನೆಗೆ ಬಂದಾಗ ಅವರನ್ನು ಅವಮಾನ ಮಾಡಿ ಕಳಿಸಿದ್ದರಲ್ಲದೇ ಜ್ಯೋತಿ ನೋಡಲು ಬಿಟ್ಟಿರಲಿಲ್ಲ ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತ ಜ್ಯೋತಿ ಇಲಿ ಪಾಷಾಣ ಸೇವಿಸಿದ್ದಳು.
ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಜ್ಯೋತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.