“ಪ್ರತಿಯೊಂದು ಲಸಿಕೆ ಜೊತೆ ಜೀವನ ಮತ್ತೊಮ್ಮೆ ಆರಂಭವಾಗಲಿದೆ. ನಾವೆಲ್ಲಾ ಈಗ ಲಸಿಕೆ ಪಡೆಯೋಣ” ಎಂಬ ಕ್ಯಾಚಿ ಕ್ಯಾಪ್ಷನ್‌ನೊಂದಿಗೆ ವಿಡಿಯೋವೊಂದನ್ನು ಶೇರ್ ಮಾಡಿರುವ ಫ್ರಾನ್ಸ್‌ನ ಆರೋಗ್ಯ ಇಲಾಖೆ ಕೋವಿಡ್ ಸಾಂಕ್ರಮಿಕದ ವಿರುದ್ಧ ಲಸಿಕೆಯ ಮಹತ್ವವನ್ನು ಪ್ರಜೆಗಳಿಗೆ ತಿಳಿಸಿ ಹೇಳುತ್ತಿದೆ.
ಸಚಿವಾಲಯದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾದ ಹೊಸ ಟ್ವೀಟ್‌ನಲ್ಲಿ ಉತ್ಸಾಹದಲ್ಲಿ ಜನ ಕೋವಿಡ್ ಲಸಿಕೆಗಳನ್ನು ಪಡೆಯುತ್ತಿರುವ ವಿಡಿಯೋ ತುಣುಕುಗಳನ್ನು ಹಾಕಿದೆ. ಜನರು ಲಸಿಕೆ ಪಡೆದ ನಂತರ ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆಗಳು, ಕಚೇರಿಗಳು, ಥಿಯೇಟರ್‌ಗಳು, ಯೂನಿವರ್ಸಿಟಿಗಳು ಹಾಗೂ ಕ್ರೀಡಾಂಗಣಗಳು ಮತ್ತೆ ತೆರೆದುಕೊಳ್ಳುತ್ತಿರುವುದನ್ನು ತೋರಿಸುವ ಮೂಲಕ ಭವಿಷ್ಯದ ಬಗ್ಗೆ ಆಶಾಭಾವನೆ ಸೃಷ್ಟಿಸುತ್ತಿದೆ ಈ ವಿಡಿಯೋ.
ತಿಂಡಿ ಖರೀದಿಸಲು ವಿಮಾನದಲ್ಲಿ ಹೊರಟ ಸ್ನೇಹಿತರಿಗೆ ಆಗಿದ್ದೇನು…?
ಜೂನ್ 9ರಂದು ಶೇರ್ ಮಾಡಲಾದ ಈ ವಿಡಿಯೋಗೆ ಇದುವರೆಗೂ ಲಕ್ಷಾಂತರ ಲಕ್ಷ ವೀವ್ಸ್ ಸಿಕ್ಕಿದ್ದು, ಸಚಿವಾಲಯದ ಈ ಕ್ರಿಯಾತ್ಮಕ ಶ್ರಮವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
https://twitter.com/olivierveran/status/1402506086767333377?ref_src=twsrc%5Etfw%7Ctwcamp%5Etweetembed%7Ctwterm%5E1402506086767333377%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fa-vaccine-promotion-video-campaign-french-ministry-going-viral-internet-7352977%2F
https://twitter.com/AnthonyJohnG/status/1402551216945733638?ref_src=twsrc%5Etfw%7Ctwcamp%5Etweetembed%7Ctwterm%5E1402551216945733638%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fa-vaccine-promotion-video-campaign-french-ministry-going-viral-internet-7352977%2F