ಶಿರಸಿ : ಗರ್ಭಗುಡಿಯಲ್ಲಿದ್ದ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಗೀಚಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರಬೈಲ್ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ನಡೆದಿತ್ತು.
ಘಟನೆ ಸಂಬಂಧ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದರು.ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಶಿವಲಿಂಗದ ಮೇಲೆ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿ ಬರೆದಿರುವ ವಿಚಾರ ಬಯಲಾಗಿದೆ. ಈತ ಪಿಯುಸಿ ಮೊದಲ ವರ್ಷದಲ್ಲಿ 98% ಅಂಕ ಪಡೆದು ಪಾಸ್ ಆಗಿದ್ದನು. ದೇವರ ಮೇಲೆ ಬಹಳ ಭಕ್ತಿ ಇಟ್ಟುಕೊಂಡಿದ್ದ ಈತ ಜೆ.ಇ ಪರೀಕ್ಷೆ ಬರೆದಿದ್ದನು. ಆದರೆ ಹೆಚ್ಚು ಅಂಕ ಬಾರದ ಕಾರಣ ಹೀಗೆ ಬರೆದಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದಾನೆ. ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಈ ಹಿನ್ನೆಲೆ ಬಾಲಸ್ನೇಹಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ. ಶಿವಲಿಂಗದ ಮೇಲೆ ಜೆಇಎಸ್ 2024, 2026 ಎಂದು ಬರೆಯಲಾಗಿತ್ತು.
ದೇವಸ್ಥಾನದ ಗರ್ಭಗುಡಿಯಲ್ಲಿರುವ ಸೋಮೇಶ್ವರ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರಗಳಲ್ಲಿ ಬರೆಯಲಾಗಿತ್ತು. ಬೆಳಿಗ್ಗೆ ಗರ್ಭಗುಡಿ ಬಾಗಿಲು ತೆರೆದಾಗ ಅರ್ಚಕರು ಶಾಕ್ ಆಗಿದ್ದರು.