ಪ್ರತಿ ವರ್ಷ ಸಹಸ್ರಾರು ಮಂದಿ ತಮ್ಮ ಕನಸುಗಳನ್ನು ನನಸಾಗಿಸಲು ಆಶಿಸುತ್ತಾ, ನಟನೆಯ ಬಗ್ಗೆ ತೀವ್ರವಾದ ಉತ್ಸಾಹದಿಂದ ಸಿನಿಮಾ ಜಗತ್ತಿಗೆ ಕಾಲಿಡುತ್ತಾರೆ. ಹೀಗಾಗಿ ದೇಶದ ಬಹುತೇಕ ಎಲ್ಲಾ ಚಿತ್ರೋದ್ಯಮಗಳಲ್ಲಿ ತೀವ್ರ ಪೈಪೋಟಿ ಇರುತ್ತದೆ.
ಆದಾಗ್ಯೂ, ಈ ಕ್ಷೇತ್ರದಲ್ಲಿ ಯಶಸ್ವಿಯಾಗುವುದು ಸುಲಭದ ಕೆಲಸವಲ್ಲ. ಸಾವಿರಾರು ಅಡೆತಡೆಗಳ ನಡುವೆಯೂ ನಟನೆಯ ಅನ್ವೇಷಣೆಯನ್ನು ಆಯ್ದುಕೊಂಡ ಜನಪ್ರಿಯ ಕಿರುತೆರೆ ನಟಿ ಆಯೇಶಾ ಕಪೂರ್ ಗೆ ಆರಂಭದಲ್ಲಿ ನಿರ್ಮಾಪಕರು ಹಲವಾರು ಷರತ್ತುಗಳನ್ನು ವಿಧಿಸುತ್ತಿದ್ದರಂತೆ.
ಹೊರಗಿನಿಂದ ನೋಡಿದರೆ ಚಿತ್ರೋದ್ಯಮ ಮನಮೋಹಕ ಮತ್ತು ಕಲರ್ ಫುಲ್ ಆಗಿ ಕಾಣಿಸಬಹುದು ಆದರೆ ವಾಸ್ತವವು ಅದರಿಂದ ದೂರವಿದೆ ಎಂದು ನಟಿ ಆಯೇಷಾ ಕಪೂರ್ ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತನಗೆ ಪ್ರಮುಖ ಪಾತ್ರವನ್ನು ನೀಡಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ, ಆದರೆ ಈ ಆಫರ್ ನಂತರ ಇಟ್ಟ ಡಿಮ್ಯಾಂಡ್ ನಿಂದಾಗಿ ಅವರ ಸಂತೋಷವು ಅಲ್ಪಕಾಲಿಕವಾಗಿತ್ತು.
ನಟಿ ಆಯೇಷಾ. ಹಲವಾರು ವೆಬ್ ಸರಣಿಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಜೀವನದಲ್ಲಿ ಯಶಸ್ಸನ್ನು ಕಾಣಲು ವಿವಿಧ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ದೂರದರ್ಶನ ಕಾರ್ಯಕ್ರಮ ಆಫೀಸ್ ಸ್ಕ್ಯಾಂಡಲ್ನೊಂದಿಗೆ ನಟಿ ಮನರಂಜನಾ ಉದ್ಯಮದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದರು. ಟಿವಿ ಧಾರಾವಾಹಿ ಶೆರ್ಡಿಲ್ ಶೆರ್ಗಿಲ್ನಲ್ಲಿ ನಿಕ್ಕಿ ಪಾತ್ರದೊಂದಿಗೆ ಅವರು ಪ್ರಾಮುಖ್ಯತೆಯನ್ನು ಪಡೆದರು.
ಹಿಂದಿನ ಸಂದರ್ಶನವೊಂದರಲ್ಲಿ, ಕಾರ್ಯಕ್ರಮದ ನಿರ್ಮಾಪಕರು ಕೆಲಸವನ್ನು ಪಡೆಯಲು ಅವರನ್ನು ಮದುವೆಯಾಗಬೇಕು ಎಂದು ಷರತ್ತು ಹಾಕಿದ್ದರು ಎಂಬ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ. ಆ ವ್ಯಕ್ತಿ ಆಕೆಗೆ ಐಷಾರಾಮಿ ಜೀವನ ನೀಡುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ನಟಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದಲ್ಲದೇ ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದರಿಂದ ಅವಕಾಶ ಕಳೆದುಕೊಳ್ಳಬೇಕಾಯಿತು.
ಸಂದರ್ಶನದಲ್ಲಿ, “ನಾನು ನಟಿಯಾಗಬೇಕೆಂದು ಬಯಸಿದ್ದೆ, ಆದರೆ ನನ್ನ ಪ್ರಯಾಣವು ಸುಲಭವಾಗಿರಲಿಲ್ಲ, ಆರಂಭದಲ್ಲಿ ನಾನು ಭೇಟಿ ಮಾಡಿದ ಕೆಲ ಜನರು ನನ್ನನ್ನು ದಾರಿ ತಪ್ಪಿಸಿದರು” ಎಂದು ಅವರು ಹೇಳಿದ್ದಾರೆ.
ಆಯೇಶಾ ಕಪೂರ್ ಅವರು ಕೊನೆಯದಾಗಿ ಮಿನಿ ಟೆಲಿವಿಷನ್ ಶೋನಲ್ಲಿ ಕಾಣಿಸಿಕೊಂಡರು, ರಫೀಕ್ ಅಬ್ದುಲ್ ವಹಾಬ್ ನಿರ್ದೇಶಿನದ ಇದರಲ್ಲಿ ಹಿಮಾಂಶು ಬಾಮ್ಜಾಯ್ ಮತ್ತು ಅನುರಾಗ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.