ಸಂಗಾತಿಗಳು ಒಟ್ಟಿಗೆ ಪ್ರಯಾಣ ಮಾಡುವುದು ಬಹಳ ಮುಖ್ಯ. ಅದರಲ್ಲೂ ಮದುವೆಗೂ ಮೊದಲು ಜೊತೆಯಾಗಿ ಪ್ರವಾಸ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಸಂಗಾತಿ ಅಥವಾ ಯಾವುದೇ ಪ್ರೀತಿಪಾತ್ರರ ನಡುವಿನ ಸಂವಹನವು ಕಡಿಮೆಯಾಗುತ್ತಿದೆ, ಸಂಬಂಧವು ಮೊದಲಿನಂತೆಯೇ ಇಲ್ಲ ಎಂಬ ಭಾವನೆ ಮೂಡಿದಲ್ಲಿ ಜೊತೆಯಾಗಿ ಪ್ರವಾಸ ಮಾಡಿ. ಇಬ್ಬರ ನೆಚ್ಚಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇದು ಸಂಬಂಧವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಸಂತೋಷದಿಂದಿರಲು ಸಹಕರಿಸುತ್ತದೆ.
ಬಿಡುವಿಲ್ಲದ ದೈನಂದಿನ ಕೆಲಸಗಳ ನಡುವೆ ಸಂಗಾತಿಗಳು ಪರಸ್ಪರರಿಗಾಗಿ ಸಮಯ ಮಾಡಿಕೊಳ್ಳಬೇಕು. ಒಟ್ಟಿಗೆ ಮಾಡುವ ಪ್ರವಾಸವು ಅವರನ್ನು ಭಾವನಾತ್ಮಕವಾಗಿ ಹತ್ತಿರ ತರುತ್ತದೆ. ಸಂಬಂಧಗಳನ್ನು ಸುಧಾರಿಸಲು ಪ್ರಯಾಣವು ಅತ್ಯುತ್ತಮ ಮಾರ್ಗವಾಗಿದೆ.
ಮದುವೆಗೂ ಮುನ್ನ ಜೋಡಿಗಳು ಜೊತೆಯಾಗಿ ಮಾಡುವ ಪ್ರವಾಸ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನೀವು ಒತ್ತಡದಲ್ಲಿದ್ದರೆ ಅದರಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಗಾಗಿ ನೈಸರ್ಗಿಕವಾಗಿ ಸುಂದರ ತಾಣಗಳಿಗೆ ಹೋಗಿ.
ಜೊತೆಯಾಗಿ ಗುಣಮಟ್ಟದ ಸಮಯವನ್ನು ಕಳೆಯುವುದು ಬಹಳ ಮುಖ್ಯ. ಒಳ್ಳೆ ಸ್ಥಳಗಳಿಗೆ ಪ್ರವಾಸ ಮಾಡಿದರೆ ಅದು ಧನಾತ್ಮಕ ಪರಿಣಾಮ ಬೀರುತ್ತದೆ. ಪ್ರಯಾಣ ಸಂಬಂಧಗಳಿಗೆ ಹೊಸ ಶಕ್ತಿಯನ್ನು ತರುತ್ತದೆ. ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೆಲಸದ ನಡುವೆ ವಿರಾಮ ತೆಗೆದುಕೊಳ್ಳುವುದರಿಂದ ನ್ಯೂನತೆಗಳು ಮತ್ತು ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ.