alex Certify ಈ ಊರಿನ ಬಹುತೇಕರ ಬಳಿ ಇದೆ ಸ್ವಂತ ವಿಮಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಊರಿನ ಬಹುತೇಕರ ಬಳಿ ಇದೆ ಸ್ವಂತ ವಿಮಾನ….!

ಬೆಂಗಳೂರಿನ ಸಂಚಾರ ದಟ್ಟಣೆ ನೋಡಿದರೆ ಕಾರು ಬಿಟ್ಟು ವಿಮಾನ, ಕಾಪ್ಟರ್‌ ಇಟ್ಟುಕೊಂಡರೆ ಹೇಗೆ ಎಂದು ಆಲೋಚಿಸಬಹುದಾದ ಕಾಲಘಟ್ಟ ಇದು. ಅಮೆರಿಕದಲ್ಲೊಂದು ಪಟ್ಟಣದ ತುಂಬಾ ವಿಮಾನಗಳದ್ದೇ ಕಾರುಬಾರು. ಕಾರುಗಳಂತೆ ವಿಮಾನವನ್ನೇ ಬಳಸ್ತಾರಂತೆ ಅಲ್ಲಿನ ಜನ. ಈ ಸಂಬಂಧ ವಿಡಿಯೊ ಒಂದು ವೈರಲ್‌ ಆಗಿದೆ.

ಎರಡನೇ ವಿಶ್ವ ಮಹಾಯುದ್ಧದ ನಂತರದ ಕಾಲಘಟ್ಟ. ಅಮೆರಿಕದಲ್ಲಿ ಅನೇಕ ವಿಮಾನ ನಿಲ್ದಾಣಗಳು ಹಾಗೆಯೇ ಉಳಿದವು. ಪೈಲಟ್‌ಗಳ ಸಂಖ್ಯೆ 1939ರಲ್ಲಿ 34,000 ಇದ್ದದ್ದು 1946ಕ್ಕೆ 4,00,000 ಆಯಿತು. ಅಲ್ಲಿನ ನಾಗರಿಕ ವಿಮಾನ ಯಾನ ಪ್ರಾಧಿಕಾರ ದೇಶಾದ್ಯಂತ ವಸತಿ ವಾಯುನೆಲೆ ಸ್ಥಾಪಿಸಲು ಮುಂದಾಯಿತು. ನಿಷ್ಕ್ರಿಯಗೊಂಡ ಸೇನಾ ಲೇನ್‌ಗಳು, ನಿವೃತ್ತ ಸೇನಾ ಪೈಲಟ್‌ಗಳಿಗೆ ಅವಕಾಶ ಸಿಕ್ಕಿತು. ಕ್ಯಾಲಿಫೋರ್ನಿಯಾದ ಕ್ಯಾಮರೂನ್‌ ಏರ್‌ಪಾರ್ಕ್‌ ಹಾಗೆ ನಿರ್ಮಾಣವಾಯಿತು. ಇದಕ್ಕೆ ಸಂಬಂಧಿಸಿದ ಟಿಕ್‌ಟಾಕ್‌ ವಿಡಿಯೋ ಈಗ ಗಮನ ಸೆಳೆಯುತ್ತಿದೆ.

ವಿಡಿಯೊದಲ್ಲಿ ತೋರಿಸಿರುವಂತೆ, ಜನ ತಮ್ಮ ಗ್ಯಾರೇಜ್‌ಗಳಲ್ಲಿ ಕಾರುಗಳನ್ನು ಇರಿಸುವಂತೆಯೇ ಈ ಪಟ್ಟಣವಾಸಿಗಳು ವಿಮಾನಗಳನ್ನು ಹ್ಯಾಂಗರ್‌ಗಳಲ್ಲಿ ಇರಿಸುತ್ತಾರೆ. ಭಾರತದಲ್ಲಿ ಟಿಕ್‌ಟಾಕ್‌ಗೆ ನಿಷೇಧವಿದ್ದು, ಅವುಗಳ ಸ್ಕ್ರೀನ್‌ ಶಾಟ್‌ ಫೋಟೋಗಳನ್ನು ಇಲ್ಲಿ ನೀಡಿದ್ದೇವೆ.

ವಿಮಾನಗಳನ್ನು ಕಾರುಗಳಂತೆ ನಿಲ್ಲಿಸಲಾಗಿದೆ –

ಬೀದಿ ಬದಿ ಮತ್ತು ಜನರ ಮನೆಗಳ ಮುಂದೆ ಅಥವಾ ಅವರ ಹ್ಯಾಂಗರ್‌ಗಳಲ್ಲಿ ವಿಮಾನಗಳು ನಿಂತಿವೆ

ವಿಶಾಲ ಬೀದಿಗಳು –

ಬೀದಿಗಳು ನಿಜವಾಗಿಯೂ ವಿಶಾಲವಾಗಿವೆ, ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ಹೋಗಲು ಬಳಸಿಕೊಳ್ಳುವಂತೆ ಅವುಗಳನ್ನು ರಚಿಸಲಾಗಿದೆ.

ಒಂದೇ ರಸ್ತೆಯಲ್ಲಿ ಕಾರುಗಳು ಮತ್ತು ವಿಮಾನಗಳು –

“ಪ್ರತಿಯೊಂದು ರಸ್ತೆಯೂ ಬೃಹತ್ತಾಗಿದೆ. ವಿಮಾನ ಮತ್ತು ಕಾರು ಪರಸ್ಪರ ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಾದುಹೋಗಬಹುದು.

ಬೀದಿ ಚಿಹ್ನೆಗಳು –

ರಸ್ತೆಯ ಚಿಹ್ನೆಗಳು ಮತ್ತು ಲೆಟರ್‌ಬಾಕ್ಸ್‌ಗಳು ವಿಮಾನದ ರೆಕ್ಕೆಗಳಿಗೆ ತಾಗಿ ಕೆಳಗೆ ಬೀಳದಂತೆ ತಡೆಯಲು ಸಾಮಾನ್ಯಕ್ಕಿಂತ ಕೆಳಮಟ್ಟದಲ್ಲಿವೆ. ರಸ್ತೆ ಹೆಸರುಗಳು ಬೋಯಿಂಗ್ ರಸ್ತೆಯಂತಹ ವಾಯುಯಾನಕ್ಕೆ ಸಂಬಂಧಿಸಿವೆ.

ಕೆಲಸಕ್ಕೆ ಪ್ರಯಾಣ –

ಇಲ್ಲಿ ರಸ್ತೆಯಲ್ಲಿ ವಿಮಾನಗಳು ಹಾದು ಹೋಗುವುದರಲ್ಲಿ ಅಸಹಜವಾದದ್ದೇನೂ ಇಲ್ಲ, ಏಕೆಂದರೆ ಇಲ್ಲಿ ಜನ ಕೆಲಸಕ್ಕೆ ಪ್ರಯಾಣಿಸಲು ವಿಮಾನವನ್ನೇ ಬಳಸುತ್ತಾರೆ.

ಮನೆಗಳಿಗೆ ಜೋಡಿಸಲಾದ ಹ್ಯಾಂಗರ್‌-

ಸ್ಥಳೀಯ ಜನರು ತಮ್ಮ ಮನೆಗಳಿಗೆ ವಿಮಾನ ಹ್ಯಾಂಗರ್‌ಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ಅಮೆರಿಕದಲ್ಲಿ ಏರ್‌ಪಾರ್ಕ್‌ಗಳು –

ಪ್ರಪಂಚದಲ್ಲಿ 630 ಕ್ಕೂ ಹೆಚ್ಚು ವಸತಿ ಏರ್‌ಪಾರ್ಕ್‌ಗಳಿವೆ, ಅವುಗಳಲ್ಲಿ 610 ಕ್ಕೂ ಹೆಚ್ಚು ಯುನೈಟೆಡ್ ಸ್ಟೇಟ್ಸ್‌ನಲ್ಲಿವೆ.

Airpark residents
Airpark residents

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...