ಬೆಂಗಳೂರು : ಒಟ್ಟು 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಟ್ಟು 20 ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರಿಂದ ನಮಗೆ ಭಯ ಇದೆ 24 ಗಂಟೆಯೂ ನಾವು ಎಚ್ಚರದಿಂದ ಇರಬೇಕು. ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬರುವವರು ಖಂಡಿತ ಬರಬಹುದು. ಪಕ್ಷದ ನಿರ್ಧಾರಕ್ಕೆ ನಾವು ಬದ್ದ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ, ಜೆಡಿಎಸ್ ಸೇರಿ ಒಟ್ಟಾರೆ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಇದನ್ನು ಆಪರೇಷನ್ ಹಸ್ತ ಎಂದು ಕೂಡ ಹೇಳಬಹುದು. ಟಿಕ್ ಟಿಕ್ ಅಂತ ಗಡಿಯಾದ ಶಬ್ದ ಮಾಡುತ್ತಲ್ಲಾ..ಆ ರೀತಿ ಶಬ್ದ ಮಾಡುತ್ತಿರುತ್ತಾರೆ, ಯಾವಾಗ ಏನೂ ಬೇಕಾದ್ರೂ ಆಗಬಹುದು ಎಂದು ಆಪರೇಷನ್ ಹಸ್ತದ ಗುಟ್ಟು ರಿವೀಲ್ ಮಾಡಿದ್ದಾರೆ.
ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ : ಡಿಸಿಎಂ ಡಿಕೆಶಿ
ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ, ಕಾಂಗ್ರೆಸ್ ಬರುವವರನ್ನು ತಡೆಯೋಕೆ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತದ ಬಗ್ಗೆ ಡಿಸಿಎ ಪರೋಕ್ಷ ಸುಳಿವು ನೀಡಿದ್ದಾರೆ.ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ನಾವು ಯಾರನ್ನೂ ಕಾಂಗ್ರೆಸ್ ಗೆ ಬನ್ನಿ ಬನ್ನಿ ಎಂದು ಕರೆಯುತ್ತಿಲ್ಲ, ಬಿಜೆಪಿ ಬಿಟ್ಟು ಕಾಂಗ್ರೆಸ್ ಬರುವವರನ್ನು ತಡೆಯೋಕೆ ಆಗಲ್ಲ, ನಿಮ್ಮ ಅಧಿಕಾರಕ್ಕಾಗಿ ಅಂದು ನಮ್ಮ ಸರ್ಕಾರ ಬೀಳಿಸಿಲ್ವಾ..? ಕಾಂಗ್ರೆಸ್ ಗೆ ಬರುವವರನ್ನು ತಡೆಯೋಕೆ ಆಗುತ್ತಾ..? ಎಂದು ಸಿಟಿ ರವಿಗೆ ಟಾಂಗ್ ನೀಡಿದರು.
ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಬಗ್ಗೆ ಭಾರಿ ಚರ್ಚೆಗಳಾಗುತ್ತಿದ್ದು, ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರ ರಾಜಕೀಯ ನಾಯಕರುಗಳ ಪರಸ್ಪರ ವಾಕ್ಸಮರಕ್ಕೂ ಕಾರಣವಾಗಿದೆ.