ದೇವಸ್ಥಾನಕ್ಕೆ ತಡರಾತ್ರಿ ವೇಳೆಗೆ ಎಂಟ್ರಿ ಕೊಟ್ಟ ಕಳ್ಳನೊಬ್ಬ ದೇವಿ ಮಂದಿರಕ್ಕೆ ನಮಸ್ಕಾರ ಮಾಡಿ ಬಳಿಕ ಇದೇ ದೇವಸ್ಥಾನದ ಗಣೇಶ ವಿಗ್ರಹವನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ಈ ಸಿಸಿ ಟಿವಿ ದೃಶ್ಯಾವಳಿಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
BREAKING: 118 ದಿನಗಳ ಬಳಿಕ ಅತಿ ಕಡಿಮೆ ಸೋಂಕಿತರ ಸಂಖ್ಯೆ ದಾಖಲು – ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ
ಗ್ರಾಮ ದೇವಿ ಮಂದಿರಕ್ಕೆ ತಡರಾತ್ರಿ ಆಗಮಿಸಿದ್ದ ಕಳ್ಳ ಗಣೇಶ ಮೂರ್ತಿಯನ್ನ ಎಗರಿಸಿ ಪರಾರಿಯಾಗಿದ್ದಾನೆ. ಸುಮಾರು ಎರಡೂವರೆ ಕೆಜಿ ತೂಕದ ಮೂರ್ತಿ ಇದಾಗಿದ್ದು ಇದಕ್ಕೆ ಬೆಳ್ಳಿಯ ಲೇಪನವನ್ನ ಮಾಡಿಸಲಾಗಿತ್ತು. ಆದರೆ ಇದನ್ನ ಸಂಪೂರ್ಣ ಬೆಳ್ಳಿ ಮೂರ್ತಿ ಎಂದುಕೊಂಡ ಕಳ್ಳ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
https://www.youtube.com/watch?v=mTlsqrKuc4Q