15 ವರ್ಷದ ವಿದ್ಯಾರ್ಥಿ ಜೊತೆ ಸೆಕ್ಸ್ ಮಾಡಿದ್ದ ಶಿಕ್ಷಕಿಯನ್ನು ವೃತ್ತಿಯಿಂದ ನಿಷೇಧಿಸಲಾಗಿದೆ .ಹೊಲವೊಂದರಲ್ಲಿ 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಹಿನ್ನೆಲೆ ಶಿಕ್ಷಕಿಯನ್ನು ವೃತ್ತಿಯಿಂದ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಕಿಂಗ್ಹ್ಯಾ ಮ್ಶೈರ್ನ ಪ್ರಿನ್ಸಸ್ ರಿಸ್ಬರೋ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಈ ಆರೋಪದ ಮೇಲೆ 38 ವರ್ಷದ ಕ್ಯಾಂಡಿಸ್ ಬಾರ್ಬರ್ 2021 ರಲ್ಲಿ ಆರು ವರ್ಷ ಮತ್ತು ಎರಡು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ವಿಚಾರಣೆಯ ಸಮಯದಲ್ಲಿ ಈಕೆ ಹದಿಹರೆಯದ ಹುಡುಗನಿಗೆ ಅಶ್ಲೀಲ ಫೋಟೋಗಳು ಮತ್ತು ಅಸಭ್ಯ ಸಂದೇಶಗಳನ್ನು ಕಳುಹಿಸುವ ಮೂಲಕ ಮೋಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಅವಳು 2018 ರಲ್ಲಿ ಅವನಿಗೆ ಸಂದೇಶ ಕಳುಹಿಸಿ ನಂತರ ವಿದ್ಯಾರ್ಥಿಯನ್ನು ಹೊಲಕ್ಕೆ ಕರೆದೊಯ್ದು ಅವನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎನ್ನಲಾಗಿದೆ.