ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ ಚಟ್ನಿ ಕೇವಲ ಚಾಟ್ ಗಳಲ್ಲಿ ಮಾತ್ರವಲ್ಲ, ಚಪಾತಿ, ಇಡ್ಲಿ, ದೋಸೆ ತಿನ್ನುವಾಗಲೂ ಬಳಸಬಹುದು. ಈ ಸಿಹಿ ಚಟ್ನಿ ಮಾಡೋದಕ್ಕೆ ಕೇವಲ ಮೂರೇ ಪದಾರ್ಥ ಸಾಕು.
ಖರ್ಜೂರ,
ಹುಣಸೆಹಣ್ಣು,
ಬೆಲ್ಲ,
ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಹುಣಸೆಹಣ್ಣು ಹಾಗೂ ಖರ್ಜೂರ ನೆನೆಸಿ. 10 ನಿಮಿಷದ ನಂತರ ನೆನೆದ ಖರ್ಜೂರ, ಹುಣಸೆಹಣ್ಣನ್ನು ಬೆಲ್ಲದ ಜೊತೆಗೆ ಕುದಿಸಿ. ಇದು ತಣ್ಣಗಾದ ಮೇಲೆ ಸೋಸಿ ಗಾಜಿನ ಬಾಟಲಿಯಲ್ಲಿ ಹಾಕಿಡಿ.
ಹೆಚ್ಚು ದಿನ ಕೆಡದೇ ಇರಬೇಕೆಂದರೆ ಫ್ರಿಡ್ಜ್ ನಲ್ಲಿ ಇಟ್ಟು ಬಳಸಬಹುದು.