ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಸಿ, ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಸಿ ನೆಲ್ಲಿಕಾಯಿ ತಿನ್ನಲು ಇಷ್ಟವಿಲ್ಲವೆನ್ನುವವರು ಅದ್ರ ಕ್ಯಾಂಡಿ ಮಾಡಿ ಸೇವನೆ ಮಾಡಬಹುದು.
ನೆಲ್ಲಿಕಾಯಿ ಸಿಹಿ ಕ್ಯಾಂಡಿ ಮಾಡಲು ಬೇಕಾಗುವ ಪದಾರ್ಥ :
ನೆಲ್ಲಿಕಾಯಿ – 250 ಗ್ರಾಂ
ಬೆಲ್ಲ – 1 ಕಪ್
ಜೀರಿಗೆ – 1 ಚಮಚ
ಓಂಕಾಳು – 1 ಚಮಚ
ಹಿಂಗು – 1/2 ಚಮಚ
ಶುಂಠಿ ಪುಡಿ – 1/2 ಚಮಚ
ಕರಿಮೆಣಸು ಪುಡಿ – 1/2 ಚಮಚ
ಕಪ್ಪು ಉಪ್ಪು – 1/2 ಚಮಚ
ಉಪ್ಪು – 1/2 ಚಮಚ
ಆಮ್ಚೂರ್ ಪುಡಿ – 1/4 ಕಪ್
ನಿಂಬೆ ರಸ – 1 ಚಮಚ
ನೆಲ್ಲಿಕಾಯಿ ಸಿಹಿ ಕ್ಯಾಂಡಿ ಮಾಡುವ ವಿಧಾನ :
ಮೊದಲು ನೆಲ್ಲಿಕಾಯಿಯನ್ನು ಸ್ವಚ್ಛವಾಗಿ ತೊಳೆದು ಕುಕ್ಕರ್ ನಲ್ಲಿ 2 ಸಿಟಿ ಹೊಡೆಸಿಕೊಳ್ಳಿ. ತಣ್ಣಗಾದ್ಮೇಲೆ ನೆಲ್ಲಿಕಾಯಿ ಬೀಜ ತೆಗೆದು ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ. ನಂತ್ರ ಇನ್ನೊಂದು ಪಾತ್ರೆಯಲ್ಲಿ ನೆಲ್ಲಿಕಾಯಿ ಮಿಶ್ರಣ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಅದಕ್ಕೆ ಬೆಲ್ಲ ಸೇರಿಸಿ.
ಬೆಲ್ಲ ಕರಗಿದ ನಂತ್ರ ಅದಕ್ಕೆ ಮಸಾಲೆ ಸೇರಿಸಿ. ನಂತ್ರ ನಿಂಬೆ ರಸವನ್ನು ಸೇರಿಸಿ. ಮಿಶ್ರಣ ತಣ್ಣಗಾದ್ಮೇಲೆ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ. ಗಾಳಿಯಾಡದ ಬಿಗಿ ಪಾತ್ರೆಯಲ್ಲಿ ಇಡಿ.