ದಾಂಪತ್ಯ ಜೀವನದಲ್ಲಿ ಸಂತಸದ ಫ್ಯಾಕ್ಟರ್ ಅನ್ನು ಹೆಚ್ಚಿಸಲು ಅಚ್ಚರಿಯ ಉಡುಗೊರೆಗಳು ಸಹಾಯ ಮಾಡುತ್ತವೆ ಎಂಬ ಸ್ಥಾಪಿತವಾದ ವಿಷಯವನ್ನು ಕೆಲವೊಂದು ಮನಃಶಾಸ್ತ್ರಜ್ಞರು ಒತ್ತಿ ಹೇಳಿದ್ದಾರೆ.
ಪತಿ-ಪತ್ನಿಯರ ನಡುವೆ ಪರಸ್ಪರ ಉಡುಗೊರೆ ವಿನಿಮಯದಿಂದ ಪರಸ್ಪರ ಕಾಳಜಿ ಮಾಡುತ್ತಾರೆ ಎಂದು ಸ್ಥಾಪಿತವಾಗುತ್ತದೆ. ಪರಸ್ಪರರು ಪ್ರತಿಯೊಬ್ಬರನ್ನು ಹೇಗೆ ವಿಶೇಷವಾಗಿ ನೋಡುತ್ತಾರೆ ಎಂದು ಇದರಿಂದ ತಿಳಿಯುತ್ತದೆ. ಮದುವೆ ವಾರ್ಷಿಕೋತ್ಸವಗಳಂಥ ವಿಶೇಷ ಸಂದರ್ಭಗಳಲ್ಲಿ ಹೀಗೆ ಉಡುಗೊರೆಗಳನ್ನು ನೀಡುವುದು ಸಂಬಂಧದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದಿದ್ದು, ಉಡುಗೊರೆಗಳನ್ನು ಕೊಡಲು ವಿಶೇಷ ಸಂದರ್ಭಕ್ಕಾಗಿ ಕಾಯುವ ಅಗತ್ಯವಿಲ್ಲ ಎನ್ನುತ್ತಾರೆ.
ನೀವೂ ಸಹ ನಿಮ್ಮ ಸಂಗಾತಿಗೆ ಉಡುಗೊರೆ ನೀಡಲು ಕಾರಣವನ್ನು ಹುಡುಕಬಹುದು. ಉದಾಹರಣೆಗೆ: ಪತಿ/ಪತ್ನಿ ಏನಾದರೂ ಒಳ್ಳೆಯದು ಮಾಡಿದರೆ ಅದನ್ನು ಪ್ರೋತ್ಸಾಹಿಸಲು ಉಡುಗೊರೆ ನೀಡಬಹುದಾಗಿದೆ. ಇದರಿಂದ ತಮ್ಮ ಪರಿಶ್ರಮವನ್ನು ಗಮನಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂಬ ಭಾವವನ್ನು ಅವರಲ್ಲಿ ಮೂಡಿಸುತ್ತದೆ. ಹಾಂ…! ಉಡುಗೊರೆ ನೀಡುವಾಗ ನಿಮ್ಮ ಸಂಗಾತಿಯ ಇಷ್ಟ-ಕಷ್ಟಗಳ ಆಯ್ಕೆಗಳ ಮೇಲೆ ಸ್ವಲ್ಪ ನಿಗಾ ಇರಲಿ ! ಅವರಿಗೆ ಬೇಡವಾದ ವಸ್ತುವೊಂದನ್ನು ಉಡುಗೊರೆ ನೀಡುವುದರಲ್ಲಿ ಅರ್ಥ ಇರೋದಿಲ್ಲ.