alex Certify ಭಾರತಕ್ಕೂ ಬರ್ತಿದೆ 350 ಕಿಮೀ ಸ್ಪೀಡ್‌ನಲ್ಲಿ ಚಲಿಸಬಲ್ಲ ಸೂಪರ್‌ ಕಾರು; ದಂಗಾಗಿಸುವಂತಿದೆ ಇದರ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೂ ಬರ್ತಿದೆ 350 ಕಿಮೀ ಸ್ಪೀಡ್‌ನಲ್ಲಿ ಚಲಿಸಬಲ್ಲ ಸೂಪರ್‌ ಕಾರು; ದಂಗಾಗಿಸುವಂತಿದೆ ಇದರ ಬೆಲೆ

Lamborghini Revuelto, Starting Price Rs 10 Crore, Launch Date 2023, Specs,  Images, News, Mileage @ ZigWheels

ಐಷಾರಾಮಿ ಕಾರುಗಳಲ್ಲೊಂದಾದ ಲ್ಯಾಂಬೋರ್ಘಿನಿ ಹೊಸ ಅವತಾರದಲ್ಲಿ ಬರ್ತಿದೆ. ರೆವೊಲ್ಟೊ ಹೆಸರಿನ ಹೊಸ ಕಾರನ್ನು ಕಂಪನಿ ಭಾರತದಲ್ಲಿ ಡಿಸೆಂಬರ್ 6 ರಂದು ಬಿಡುಗಡೆ ಮಾಡಲಿದೆ. ಇದು Aventadorನ ಉತ್ತರಾಧಿಕಾರಿ ಎನ್ನಬಹುದು. V12 ಹೈಬ್ರಿಡ್ ಪ್ಲಗ್-ಇನ್ ಪವರ್‌ಟ್ರೇನ್‌ನೊಂದಿಗೆ ಬರ್ತಿರೋ ಲ್ಯಾಂಬೋರ್ಘಿನಿ ಕಂಪನಿಯ ಮೊದಲ ಕಾರು ಇದು.

6.5-ಲೀಟರ್ V12 ಎಂಜಿನ್ ಅನ್ನು ರೆವೊಲ್ಟೊ ಹೊಂದಿದೆ. ಇದರೊಂದಿಗೆ ಮೂರು ಎಲೆಕ್ಟ್ರಿಕ್ ಮೋಟರ್‌ಗಳು, ಡಬಲ್-ಕ್ಲಚ್ 8 –ಸ್ಪೀಡ್‌ ಪ್ರೊಸೆಸರ್‌ ಮತ್ತು 3.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಇದು CBU ಘಟಕವಾಗಿ ಭಾರತದಲ್ಲಿ ಲಭ್ಯವಾಗಲಿದೆ. ಕಸ್ಟಮ್ ಸುಂಕ ಮತ್ತು ಸ್ಥಳೀಯ ತೆರಿಗೆ ಇತ್ಯಾದಿಗಳನ್ನು ಸೇರಿಸಿದ ನಂತರ ಈ ಹೈಬ್ರಿಡ್ ಸೂಪರ್‌ಕಾರ್‌ನ ಬೆಲೆ ಸುಮಾರು 10 ಕೋಟಿ ರೂಪಾಯಿ ಆಗಲಿದೆ.

ಇದರ ಎಂಜಿನ್ 825bhp ಮತ್ತು 750 nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. Revuelto ಆಲ್-ವೀಲ್-ಡ್ರೈವ್ ಸೂಪರ್‌ಕಾರ್ ಆಗಿದ್ದು, ಇದು 0-100 ಕಿಮೀ ವೇಗವನ್ನು 2.5 ಸೆಕೆಂಡುಗಳಲ್ಲಿ ಪಡೆಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 350 ಕಿಮೀಗಿಂತ ಹೆಚ್ಚು.

ಲ್ಯಾಂಬೋರ್ಘಿನಿಯ ಹೊಸ ವಿನ್ಯಾಸ ಏರೋಸ್ಪೇಸ್ ಅಂಶಗಳಿಂದ ಪ್ರೇರಿತವಾಗಿದೆ. ಮುಂಭಾಗದಲ್ಲಿ ಶಾರ್ಕ್-ನೋಸ್‌ ವಿನ್ಯಾಸ ಮತ್ತು Y-ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಕಾರ್ಬನ್-ಫೈಬರ್ ಹುಡ್, ಏರೋಡೈನಾಮಿಕ್ ಬ್ಲೇಡ್‌ ಇದರ ವಿಶೇಷತೆ.

ಈ ಕಾರಿನ ಡ್ಯಾಶ್‌ಬೋರ್ಡ್ ಲೇಔಟ್ ವೈ-ಆಕಾರದ ಥೀಮ್ ಅನ್ನು ಹೊಂದಿರುತ್ತದೆ. 9.1-ಇಂಚಿನ ಪ್ಯಾಸೆಂಜರ್-ಸೈಡ್ ಡಿಸ್‌ಪ್ಲೇ ಹಾಗೂ 8.4-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು 12.3-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಅನ್ನು ಹೊಂದಿದ್ದು, ಸ್ಟೀರಿಂಗ್ ವೀಲ್ ಮೇಲೆ ಮೌಂಟೆಡ್‌ ಕಂಟ್ರೋಲ್‌ ಇದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...