
ಕುರ್ತಾ ಪೈಜಾಮಾ ಧಾರಿಯಾಗಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ವೇದಿಕೆಗೆ ಆಗಮಿಸಿದ ಮಹೇಶ್ ನಾರಾಯಣ್ ಹೆಸರಿನ ಈ ವಿದ್ಯಾರ್ಥಿ, ನೋಡ ನೋಡುತ್ತಲೇ ಭಾರತದ ಧ್ವಜವನ್ನು ಹೊರ ತೆಗೆದು ಅದನ್ನು ಹರಡಿಸಿ ಹಿಡಿಯುವುದನ್ನು ಕಂಡ ದೇಶೀ ನೆಟ್ಟಿಗರಿಗೆ ರೋಮಾಂಚನ ಭಾವ ಮೂಡಿದೆ.
ಭಾರತೀಯ ಸಾಂಪ್ರದಾಯಿಕ ಧಿರಿಸಿನಲ್ಲಿ ವಿದೇಶದ ವಿವಿಯೊಂದರಲ್ಲಿ ಬಂದು ಪದವಿ ಪ್ರಮಾಣ ಪತ್ರ ಸ್ವೀಕರಿಸಿದ ಈ ವಿದ್ಯಾರ್ಥಿಯ ಕುರಿತು ಬಹುತೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕಾಮೆಂಟ್ ಸೆಕ್ಷನ್‌ನಲ್ಲಿ ಮೆಚ್ಚುಗೆಗಳ ನಡುವೆಯೇ, “ಇವರುಗಳ ಪೈಕಿ ಎಷ್ಟು ಮಂದಿ ಭಾರತಕ್ಕೆ ಮರಳಿ ನೆಲೆಸುತ್ತಾರೆ?” ಎಂಬ ಪ್ರಶ್ನೆ ತೇಲಿ ಬಂದಿದೆ.
“ಭಾರತದಲ್ಲಿ ಭಾರೀ ದೊಡ್ಡ ಜನಸಂಖ್ಯೆ ಇದೆ. ಕಡೇ ಪಕ್ಷ ಅವರು ನಮ್ಮ ದೇಶದ ಹೆಸರನ್ನು ದೊಡ್ಡ ಮಟ್ಟದಲ್ಲಿ ಇಟ್ಟಿದ್ದಾರೆ,” ಎಂದು ಇದಕ್ಕೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.