ಬೆಂಗಳೂರು : ಪಕ್ಕದ್ಮನೆಯ ಗಂಡ-ಹೆಂಡತಿ ಬೆಡ್ ರೂಂ ನ ಕಿಟಕಿ ಬಾಗಿಲುಗಳನ್ನು ಹಾಕದೇ ಸರಸ ಸಲ್ಲಾಪದಲ್ಲಿ ತೊಡಗುತ್ತಾರೆ, ಇದರಿಂದ ನಮಗೆ ಬಹಳ ಕಿರಿಕಿರಿಯಾಗುತ್ತಿದೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.ಬಿಡಿಎ ಲೇಔಟ್ ನಲ್ಲಿ ವಾಸವಾಗಿದ್ದ 44 ವರ್ಷದ ಮಹಿಳೆ ಈ ದೂರು ದಾಖಲಿಸಿದ್ದಾರೆ.
ಏನಿದು ಘಟನೆ
ನಮ್ಮ ಪಕ್ಕದ ಮನೆಯಲ್ಲಿ ದಂಪತಿ ಜೋಡಿಯೊಂದು ವಾಸವಾಗಿದೆ. ನಮ್ಮ ಮನೆಯ ಬಾಗಿಲ ಎದುರಿಗೆ ಪಕ್ಕದ ಮನೆ ಬೆಡ್ ರೂಂ ಇದೆ. ಅವರು ಬೆಡ್ ರೂಂನ ಕಿಟಕಿ, ಡೋರ್ ತೆಗೆದುಕೊಂಡು ಸರಸ ಸಲ್ಲಾಪವಾಡುತ್ತಾರೆ. ವಿಕೃತವಾಗಿ ವರ್ತಿಸುತ್ತಾರೆ. ಬಾಗಿಲು ಹಾಕಿಕೊಳ್ಳಿ ಎಂದು ಹೇಳಿದರೆ ನಮಗೆ ಅವಾಚ್ಯವಾಗಿ ನಿಂದಿಸುತ್ತಾರೆ. ಅಲ್ಲದೇ ಅತ್ಯಾಚಾರ ಬೆದರಿಕೆ ಕೂಡ ಒಡ್ಡಿದ್ದಾನೆ. ಆರೋಪಿಗೆ ಮನೆ ಮಾಲೀಕನೂ ಕೂಡ ಸಾಥ್ ನೀಡಿದ್ದಾನೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮಹಿಳೆ ಮನೆ ಮಾಲೀಕ ಚಿಕ್ಕಣ್ಣ, ಹಾಗೂ ಆತನ ಪುತ್ರ ಮಂಜುನಾಥ್, ಪಕ್ಕದ ಮನೆ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.