alex Certify ಒಂದು ಚಮಚ ‘ಆಪಲ್ ವಿನೆಗರ್’ ನೀಡಲಿದೆ ಈ 10 ಸಮಸ್ಯೆಗೆ ಪರಿಹಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಚಮಚ ‘ಆಪಲ್ ವಿನೆಗರ್’ ನೀಡಲಿದೆ ಈ 10 ಸಮಸ್ಯೆಗೆ ಪರಿಹಾರ….!

ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಮಹಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಕಾರಣಕ್ಕೆ ಮಹಿಳೆಯರಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ.

ಮಹಿಳೆಯರು ಅಡುಗೆ ಮನೆಯಲ್ಲಿರುವ ಪದಾರ್ಥ ಬಳಸಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆಪಲ್ ವಿನೆಗರ್ ಮಹಿಳೆಯರ ಅನೇಕ ಸಮಸ್ಯೆಗೆ ರಾಮಬಾಣ.

ತೂಕ ಹೆಚ್ಚಳ ಮಹಿಳೆಯರ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು. ಆಪಲ್ ವಿನೆಗರ್ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು. ತೂಕ ಇಳಿಸಿಕೊಳ್ಳಲು ಅರ್ಧ ಚಮಚ ಆಪಲ್ ವಿನೆಗರನ್ನು ನಿಂಬೆ ರಸದೊಂದಿಗೆ ಬೆರೆಸಿ ಬೆಳಿಗ್ಗೆ ಅಥವಾ ಊಟಕ್ಕೆ ಮುಂಚಿತವಾಗಿ ಕುಡಿಯುವುದರಿಂದ ತೂಕವನ್ನು ವೇಗವಾಗಿ ಕಡಿಮೆ ಯಾಗುತ್ತದೆ.

ಹೊಟ್ಟೆಗೆ ಆಪಲ್ ವಿನೆಗರ್ ತುಂಬಾ ಒಳ್ಳೆಯದು. ಇದರಿಂದ ಹೊಟ್ಟೆಯ ಪಚನಕ್ರಿಯೆ ಸರಿಯಾಗಿ ಆಗುತ್ತದೆ. ಗ್ಯಾಸ್ನಿಂದ ಪರಿಹಾರ ಪಡೆಯಲು 1 ಚಮಚ ಆಪಲ್ ವಿನೆಗರ್ ಜೊತೆ 1  ಚಮಚ ಶುಂಠಿ ರಸ, 1 ಚಮಚ ನಿಂಬೆ ರಸ, ಚಿಟಕಿ ಅಡುಗೆ ಸೋಡಾ, ಹನಿ ಜೇನು ತುಪ್ಪವನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದರಿಂದ ಗ್ಯಾಸ್ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ.

ಪ್ರತಿದಿನ ಒಂದು ಟೀ ಚಮಚ ಆಪಲ್ ವಿನೆಗರ್ ಸೇವಿಸೋದ್ರಿಂದ  ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

ಒಂದು ಟೀಸ್ಪೂನ್ ಆಪಲ್ ವಿನೆಗರ್, ಒಂದು ಚಮಚ ಕಾಳು ಮೆಣಸಿನ ಪುಡಿ ಮತ್ತು ಮೂರು ಟೀ ಚಮಚ ಶುದ್ಧ ಜೇನುತುಪ್ಪದೊಂದಿಗೆ ಬೆರೆಸಿದ ನೀರನ್ನು ಕುಡಿಯುವುದ್ರಂದ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಸಾಯುತ್ತದೆ.

ಆಯಾಸ ಮತ್ತು ವ್ಯಾಯಾಮದ ಸೆಳೆತವನ್ನು ನಿವಾರಿಸಲು ಆಪಲ್  ವಿನೆಗರ್ ಸಹಾಯಕಾರಿ.

ಆಪಲ್ ವಿನೆಗರ್ ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ಹತ್ತಿಯನ್ನು ಆಪಲ್ ವಿನೆಗರ್ ನಲ್ಲಿ ನೆನೆಸಿ ಮುಖದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಎಣ್ಣೆ ಚರ್ಮಕ್ಕೆ ತುಂಬಾ ಪರಿಣಾಮಕಾರಿ. ಇದು ಚರ್ಮಕ್ಕೆ ತಂಪನ್ನು ನೀಡುತ್ತದೆ.

ಮೂಲವ್ಯಾದಿಯಿಂದ ಬಳಲುವವರು ಹತ್ತಿ ಬಟ್ಟೆಗೆ ಆಪಲ್ ವಿನೇಗರ್ ಹನಿ ಹಾಕಿ ಅದನ್ನು ಉರಿಯುವ ಜಾಗಕ್ಕೆ ಹಚ್ಚಬೇಕು. ಇದು ಮಲವಿಸರ್ಜನೆ ವೇಳೆ ಆಗುವ ಉರಿ ಹಾಗೂ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ಒಂದು ಹನಿ ಆಪಲ್ ವಿನೆಗರ್ ಗೆ ಬೆಚ್ಚಗಿನ ನೀರು ಬೆರೆಸಿ ಯೋನಿ ಸ್ವಚ್ಛಗೊಳಿಸಿಕೊಂಡ್ರೆ ಯೋನಿ ಉರಿ, ತುರಿಕೆ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...