‘ನನ್ನೊಲವ ತಾರೆ’ ಎಂಬ ರೋಮ್ಯಾಂಟಿಕ್ ಆಲ್ಬಮ್ ಹಾಡು ರಿತ್ವಿಕ್ ಮುರಳೀಧರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ. ಖ್ಯಾತ ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ್ ಈ ಹಾಡಿಗೆ ಧ್ವನಿ ಆಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಶ್ರೀ ಗಣೇಶ್ ಪರಶುರಾಮ್ ಅವರ ಸಾಹಿತ್ಯವಿದೆ.
ರಾಮ್ ಲತೀಶ್ ಈ ಹಾಡಿನ ನಾಯಕ ನಾಯಕಿಯಾಗಿದ್ದು, ಶ್ರೀ ಗಣೇಶ್ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. ವಿಜೇತ್ ಚಂದ್ರ ಸಂಕಲನ, ಹಾಗೂ ಉದಯ್ ಲೀಲಾ ಅವರ ಛಾಯಾಗ್ರಾಣವಿದೆ. ತ್ರಿಶೂಲ್ ಎಂಡೀವರ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಸುಧಾ ರಾಣಿ, ಹರ್ಷ ಚರಣ್, ಭರತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.