ಜೂನ್ 21ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ‘ಸಂಭವಾಮಿ ಯುಗೇ ಯುಗೇ’ ಚಿತ್ರ ಅಂದುಕೊಂಡಂತೆ ಪ್ರೇಕ್ಷಕರ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಹಳ್ಳಿ ಸೊಗಡಿನ ಅದ್ಭುತ ಕಥೆಗೆ ಸಿನಿ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಸಂಭವಾಮಿ ಯುಗೇ ಯುಗೇ ಚಿತ್ರತಂಡ ಇಂದು ತಾಯಿಯ ಕುರಿತ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ‘ಅಮ್ಮ ಓ ಅಮ್ಮ’ ಎಂಬ ಈ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.
ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಜೈ ಶೆಟ್ಟಿ ನಾಯಕನಾಗಿದ್ದು, ಪ್ರಮೋದ್ ಶೆಟ್ಟಿ, ಸುಧಾ ರಾಣಿ, ಭವ್ಯ, ಅಶೋಕ್ ಕುಮಾರ್, ನಿಶಾ ರಜಪೂತ್, ಮಧುರಾ ಗೌಡ, ಅಭಯ್ ಪುನಿತ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಿದ್ದು, ರವೀಶ್ ಆತ್ಮರಾಮ್ ಸಂಕಲನ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಹಾಗೂ ನರಸಿಂಹ. ಸಿ ಸಾಹಸ ನಿರ್ದೇಶನವಿದೆ.