ವಿರಾಟ್ ಅಭಿನಯದ ಬಹು ನಿರೀಕ್ಷಿತ ‘ರಾಯಲ್’ ಚಿತ್ರ ಇದೇ ಜನವರಿ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ರಾಯಲ್ ಚಿತ್ರತಂಡ ಇದೀಗ ‘ನೂರು ಕೋಟಿ ದೇವರು’ ಎಂಬ ತಾಯಿಯ ಕುರಿತ ಎಮೋಷನಲ್ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ಇದೇ ಜನವರಿ ಐದರಂದು ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ.
ದಿನಕರ್ ನಿರ್ದೇಶನದ ಈ ಚಿತ್ರದಲ್ಲಿ ವಿರಾಟ್ ಸೇರಿದಂತೆ ಸಂಜನಾ ಆನಂದ್, ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಗೋಪಾಲ್ ದೇಶಪಾಂಡೆ ತೆರೆ ಹಂಚಿಕೊಂಡಿದ್ದು, ಜಯಣ್ಣ ಫಿಲಂಸ್ ಬ್ಯಾನರ್ ನಲ್ಲಿ ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ.
ಕೆಎಂ ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಹಾಗೂ ಸಂಕೇತ್ ಛಾಯಾಗ್ರಹಣವಿದೆ. ಇನ್ನುಳಿದಂತೆ ಚರಣ್ರಾಜ್ ಎಂ ಆರ್ ಸಂಗೀತ ಸಂಯೋಜನೆ ನೀಡಿದ್ದಾರೆ.