ಕಾಬೂಲ್: ತಾಲಿಬಾನ್ ಉಗ್ರರ ಕ್ರೌರ್ಯ, ಕಠಿಣವಾದ ಶರಿಯಾ ಕಾನೂನಿನ ಅಡಿಯಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಕ್ಕೆ ಹೆದರಿರುವ ಆಫ್ಘನ್ ಪ್ರಜೆಗಳು ತಮ್ಮ ಮಕ್ಕಳ ಭವಿಷ್ಯವಾದರೂ ವಿದೇಶಗಳಲ್ಲಿ ಸುರಕ್ಷಿತವಾಗಿ ಇರಲಿ ಎಂದು ಆಶಿಸುತ್ತಿದ್ದಾರೆ. ಹಾಗಾಗಿ ನಿತ್ಯವೂ ಕಾಬೂಲ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಕ್ಷಣಾ ಗೋಡೆಯ ಸುತ್ತಲೂ ನಿಂತುಕೊಂಡು ಸಣ್ಣ ಮಕ್ಕಳನ್ನು ಗೋಡೆ ಆಚೆಗೆ ಎಸೆದು, ಅಲ್ಲಿರುವ ಅಮೆರಿಕ-ಬ್ರಿಟನ್ ಯೋಧರಿಗೆ ಮಕ್ಕಳನ್ನು ಪೋಷಿಸಲು ಕೈ ಮುಗಿಯುತ್ತಿದ್ದಾರೆ.
2ನೇ ಡೋಸ್ ಪಡೆದವರ ಪೈಕಿ 87 ಸಾವಿರ ಜನರಿಗೆ ಕೊರೊನಾ ಸೋಂಕು, ಕೇರಳದಲ್ಲೇ ಗರಿಷ್ಠ!
ಸ್ವಲ್ಪ ದೊಡ್ಡ ಬಾಲಕ-ಬಾಲಕಿಯರನ್ನು ಗೋಡೆಯ ಮೇಲೆ ಹತ್ತಿಸಿ, ಬ್ರಿಟನ್ ಯೋಧರಿಗೆ ಒಪ್ಪಿಸಿಕೊಳ್ಳಲು ಅಂಗಲಾಚುತ್ತಿದ್ದಾರೆ. ಮಕ್ಕಳನ್ನು ಪುನರ್ವಸತಿ ಶಿಬಿರಗಳಲ್ಲಿ ಜೋಪಾನ ಮಾಡುವಂತೆ ಯೋಧರನ್ನು ಬೇಡುತ್ತಿದ್ದಾರೆ. ಇಂಥ ದೃಶ್ಯವೊಂದು ವೈರಲ್ ಆಗಿದ್ದು, ವಿಶ್ವಾದ್ಯಂತ ಜನರ ಮನಕಲುಕುತ್ತಿದೆ.
ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿರುವ ಬ್ರಿಟನ್ ರಕ್ಷಣಾ ಸಚಿವ ಬೆನ್ ವ್ಯಾಲ್ಲೇಸ್ ಅವರು, ” ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ನಮ್ಮ ಯೋಧರು ಹಾಗೆಯೇ ಪೋಷಕರಿಂದ ಸ್ವೀಕರಿಸಿ, ಶಿಬಿರಗಳಲ್ಲಿ ಇರಿಸಿಕೊಳ್ಳಲು ಆಗಲ್ಲ. ಕಾನೂನುಬಾಹಿರ ಆಗುತ್ತದೆ. ಹಾಗಾಗಿ ಮಕ್ಕಳನ್ನು ಹಿಂದಿರುಗಿಸುತ್ತಿದ್ದೇವೆ” ಎಂದಿದ್ದಾರೆ.