ಸ್ಮಾರ್ಟ್ಫೋನ್ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್ಗಳು ಬರುತ್ತವೆ. ಬ್ಯಾಂಕ್ ಆಫರ್ಸ್, ಲೋನ್ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು ಕೆಲವರು ಎಚ್ಚರಿಕೆಯಿಂದ ಓದುತ್ತಾರೆ, ಅನೇಕರು ಪ್ರತಿಕ್ರಿಯಿಸುತ್ತಾರೆ.
ಇಂತಹ ಮೆಸೇಜ್ಗಳನ್ನು ಓದಿ ರಿಪ್ಲೈ ಮಾಡುವ ಬದಲು ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ. ಆಗ ಮಾತ್ರ ಬ್ಯಾಂಕ್ ಖಾತೆಯಲ್ಲಾಗುವ ವಂಚನೆಯನ್ನು ತಪ್ಪಿಸಬಹುದು. ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಮೆಸೇಜ್ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಪೂರ್ವ ಅನುಮೋದಿತ ಸಾಲ
ನಿಮಗೆ ನಿರ್ದಿಷ್ಟ ಬ್ಯಾಂಕ್ನಿಂದ ಸಾಲ ನೀಡಲಾಗುತ್ತಿದೆ, ಇದಕ್ಕಾಗಿ ಯಾವುದೇ ದಾಖಲಾತಿ ಅಗತ್ಯವಿಲ್ಲ ಎಂದೆಲ್ಲ ಹಲವಾರು ಬಾರಿ ಸಂದೇಶಗಳು ಬರುತ್ತವೆ. ಅಂತಹ ಮೆಸೇಜ್ಗಳನ್ನು ನಿರ್ಲಕ್ಷಿಸಬೇಕು ಮತ್ತು ಡಿಲೀಟ್ ಮಾಡಿಬಿಡಬೇಕು. ಅವುಗಳಿಗೆ ರಿಪ್ಲೈ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚು.
ಬ್ಯಾಂಕ್ ಆಫರ್ ನೆಪ
ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಅಥವಾ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬ ಮಾಹಿತಿ ನೀಡುವಂತಹ ಮೆಸೇಜ್ಗಳು ಕೂಡ ಬರುತ್ತವೆ. ಆದರೆ ಇವುಗಳನ್ನು ನಂಬಿ ಮೋಸಹೋಗಬೇಡಿ.
ತ್ವರಿತ ನಗದು ಸಾಲ
ನಿಮಗೆ ಬ್ಯಾಂಕ್ನಿಂದ ತ್ವರಿತ ನಗದು ಸಾಲವನ್ನು ನೀಡಲಾಗುತ್ತಿದೆ, ಇದು ತುಂಬಾ ಸುಲಭವಾದ ಪ್ರಕ್ರಿಯೆ ಎಂಬ ಮೆಸೇಜ್ ಬಂದರೆ ಅದನ್ನು ಕೂಡಲೇ ಡಿಲೀಟ್ ಮಾಡಿ. ಈ ಸಂದೇಶವು ವಂಚಕರಿಂದ ಕೂಡ ಬಂದಿರಬಹುದು. ಗ್ರಾಹಕರ ಖಾತೆಯಲ್ಲಿರುವ ಹಣ ಲಪಟಾಯಿಸಲು ಮಾಡಿರುವ ತಂತ್ರವೂ ಇರಬಹುದು.
OTP ಶೇರಿಂಗ್
ಅನೇಕ ಬಾರಿ ಬ್ಯಾಂಕ್ ನವರೆಂದು ಹೇಳಿಕೊಂಡು ವಂಚಕರು ಗ್ರಾಹಕರಿಗೆ ಕರೆ ಮಾಡಿ ಓಟಿಪಿ ಪಡೆಯುತ್ತಾರೆ. ನಂತರ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ಇಂತಹ ಮೆಸೇಜ್ಗಳು ಬಂದಲ್ಲಿ ಓಟಿಪಿಯನ್ನು ಶೇರ್ ಮಾಡಬೇಡಿ. ಅದು ನಿಮಗೆ ಲಕ್ಷಗಟ್ಟಲೆ ನಷ್ಟವನ್ನು ಉಂಟುಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತವು ಕ್ಷಣಾರ್ಧದಲ್ಲಿ ಕಣ್ಮರೆಯಾಗಬಹುದು.