
ಏ ಟು ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಾಳೆ ಸಂಜೆ ಆರು ಗಂಟೆಗೆ ‘Bloody domino’ ಕಿರು ಚಿತ್ರ ಸಂಜೆ ಆರು ಗಂಟೆಗೆ ಬಿಡುಗಡೆಯಾಗುತ್ತಿದೆ. ಈ ಕುರಿತು ಏಟು ಮೂವೀಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಶಾರ್ಟ್ ಫಿಲಂ ಅನ್ನು ಶ್ರೀಷ ವಿಟ್ಟಲ್ ನಿರ್ದೇಶಿಸಿದ್ದು, ಶಿವಾಂಕ್, ಚಂದನನಾಗ್, ಶ್ರೀಕುಮಾರ್, ಮತ್ತು ಪವನ್ ಕುಮಾರ್ ಅಭಿನಯಿಸಿದ್ದಾರೆ.
ಅಜಿತ್ ಕೆ ಪಿ ಸಂಗೀತ ಸಂಯೋಜನೆ ನೀಡಿದ್ದು, ವಿನಾಯಕ್ ಅವರ ಸಂಕಲನ ಮಧುಸೂದನ್ ಛಾಯಾಗ್ರಾಣವಿದೆ. ಇದರ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.
