ಕನ್ನಡ ಕಿರು ಚಿತ್ರಗಳು ವಿಭಿನ್ನ ಕಥೆಯ ಮೂಲಕ ನೋಡುಗರ ಗಮನ ಸೆಳೆಯುತ್ತಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುತ್ತಿವೆ. ಇದೀಗ ಶ್ರೇಯಸ್ ಪಿ ಬಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಡ್ಯುಯಲ್ ಸಿಮ್’ ಕಿರುಚಿತ್ರ ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.ಇಬ್ಬರು ಹುಡುಗಿಯರನ್ನು ಪ್ರೀತಿಸುವ ಹುಡುಗನ ಪಾಡು ಏನಾಗುತ್ತದೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.
ಈ ಶಾರ್ಟ್ ಫಿಲಂನಲ್ಲಿ ಜ್ಞಾನೇಂದ್ರ ಎಚ್ ಆರ್, ರಾಜಲಕ್ಷ್ಮಿ, ಚಿತ್ರ, ಅರ್ಜುನ್ ಹಾಗೂ ವಿನಯ್ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗಗನ್ ಹಾಗೂ ನಿರ್ದೇಶಕ ಶ್ರೇಯಸ್ ಪಿ ಬಿ ಸಂಗೀತ ಸಂಯೋಜನೆ ನೀಡಿದ್ದಾರೆ. ದರ್ಶನ್ ಕೆ ಅವರ ಸಂಕಲನ, ಹಾಗೂ ಛಾಯಾಗ್ರಹಣವಿದೆ.