ಹೈದರಾಬಾದ್ : ಅಮೆರಿಕದಲ್ಲಿ ಹಡಗು ಡಿಕ್ಕಿ ಹೊಡೆದ ಪರಿಣಾಮ ಬಾಲ್ಟಿಮೋರ್ ನಗರದಲ್ಲಿ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿದೆ.
ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಡಿಕ್ಕಿ ಹೊಡೆದಿದ್ದು, 6 ಮಂದಿ ಮೃತಪಟ್ಟಿದ್ದು, ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಅಪಘಾತದ ಪರಿಣಾಮ ಸೇತುವೆಯ ಮೇಲಿಂದ ಹಲವಾರು ವಾಹನಗಳು ನದಿಗೆ ಬಿದ್ದಿವೆ. ಕನಿಷ್ಠ 20 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 6 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಸೋಮವಾರ ಮಧ್ಯರಾತ್ರಿಯ ನಂತರ ದೊಡ್ಡ ಪ್ರಮಾಣದ ಕಂಟೈನರ್ ಹಡಗು ಸೇತುವೆಗೆ ಡಿಕ್ಕಿ ಹೊಡೆದಿದೆ. ಸೇತುವೆ ಮಕ್ಕಳ ಆಟಿಕೆಯಂತೆ ಕುಸಿಯುವ ದೃಶ್ಯಗಳು ವೈರಲ್ ಆಗಿವೆ. ಕಳೆದ ತಿಂಗಳು ಚೀನಾದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.