ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಸಂಭವಿಸಿದ ಭೂಕಂಪದಲ್ಲಿ 4,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೂ ಜಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6.2 ತೀವ್ರತೆಯ ಎರಡು ಭೂಕಂಪಗಳಲ್ಲಿ ಸುಮಾರು 2,000 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎನ್ಡಿಎಂಎ) ತಿಳಿಸಿದೆ.
“ಇಲ್ಲಿಯವರೆಗೆ, ಸಾವುನೋವುಗಳಿಗೆ ಸಂಬಂಧಿಸಿದಂತೆ ನಾವು ಪಡೆದ ಅಂಕಿಅಂಶಗಳು ದುರದೃಷ್ಟವಶಾತ್ 4,000 ಜನರನ್ನು ಮೀರಿದೆ. ನಮ್ಮ ಮಾಹಿತಿಯ ಪ್ರಕಾರ, ಸುಮಾರು 20 ಹಳ್ಳಿಗಳಲ್ಲಿ, ಸರಿಸುಮಾರು 1,980 ರಿಂದ 2,000 ಮನೆಗಳು ಸಂಪೂರ್ಣವಾಗಿ ಕುಸಿದಿವೆ ” ಎಂದು ಎಎನ್ಡಿಎಂಎ ವಕ್ತಾರ ಮುಲ್ಲಾ ಸೈಕ್ ಕಾಬೂಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶನಿವಾರ ಮಧ್ಯಾಹ್ನ ಹೆರಾತ್ ಪ್ರಾಂತ್ಯ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿದ್ದು, ಮೊದಲ ಭೂಕಂಪವು ಸ್ಥಳೀಯ ಸಮಯ 11.10 ರ ಸುಮಾರಿಗೆ (0640 ಜಿಎಂಟಿ) ಸಂಭವಿಸಿದೆ.ವಿವಿಧ ಸಂಸ್ಥೆಗಳ 35 ರಕ್ಷಣಾ ತಂಡಗಳಲ್ಲಿ ಒಟ್ಟು 1,000 ಕ್ಕೂ ಹೆಚ್ಚು ರಕ್ಷಕರು ಪೀಡಿತ ಪ್ರದೇಶಗಳಲ್ಲಿ ಪರಿಹಾರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಹಂಗಾಮಿ ಪ್ರಧಾನಿ ಮೊಹಮ್ಮದ್ ಹಸನ್ ಅಖುಂದ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ಹೆರಾತ್ ಪ್ರಾಂತ್ಯದ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿತು. ಚೀನಾ ಭಾನುವಾರ ಅಫ್ಘಾನ್ ರೆಡ್ ಕ್ರೆಸೆಂಟ್ಗೆ ತನ್ನ ರಕ್ಷಣಾ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡಲು ತುರ್ತು ಮಾನವೀಯ ಸಹಾಯವಾಗಿ 200,000 ಯುಎಸ್ ಡಾಲರ್ ನಗದು ಒದಗಿಸಿದೆ.