ಕೊಲ್ಕತ್ತಾದಲ್ಲಿ ಮಾನವ ತಲೆ ತಗ್ಗಿಸುವ ಘಟನೆ ನಡೆದಿದೆ. ವೈದ್ಯನೊಬ್ಬ ನಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಆಯುರ್ವೇದ ವೈದ್ಯನಾಗಿದ್ದು, ಅವನ ವಿರುದ್ಧ ರೀಜೆಂಟ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು 100ಕ್ಕೆ ಕರೆ ಮಾಡಿ ವೈದ್ಯನ ಹೀನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾಳೆ. ದೂರು ಬರ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿ ವೈದ್ಯನ ವಯಸ್ಸು 60 ವರ್ಷ. ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿ ವೈದ್ಯ ಕಳೆದ ಒಂದೂವರೆ ವರ್ಷಗಳಿಂದ ಅರವಿಂದ್ ಪಾರ್ಕ್ನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ.
ಆಹಾರ ನೀಡುವ ನೆಪದಲ್ಲಿ ನಾಯಿಯನ್ನು ವೈದ್ಯ ಕರೆದೊಯ್ದಿದ್ದಾನಂತೆ. ಇದನ್ನು ಮಹಿಳೆ ನೋಡಿದ್ದಳು. ನಂತ್ರ ನಾಯಿ ಜನನಾಂಗದಲ್ಲಿ ರಕ್ತ ಕಾಣಿಸಿದೆ. ಇದ್ರಿಂದ ಆಘಾತಕ್ಕೊಳಗಾದ ಮಹಿಳೆ ಘಟನೆ ಬಗ್ಗೆ ಊಹಿಸಿ, ಮಹಿಳೆ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ.