ದಿನದಿಂದ ದಿನಕ್ಕೆ ಕೆಜಿಎಫ್ ದಾಖಲೆಗಳನ್ನು ಬರೆಯುತ್ತಲೇ ಬರುತ್ತಿರುವಂತೆಯೇ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಮನೆ ಮಾತಾಗಿರುವ ನಟನಾಗಿ ಹೊರಹೊಮ್ಮಿದ್ದಾರೆ. ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿ ಅತ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವ ಕೆಜಿಎಫ್ ಚಿತ್ರದಿಂದಾಗಿ ಯಶ್ ಗೆ ಕರ್ನಾಟಕ ಒಂದರಲ್ಲಿ ಮಾತ್ರವಲ್ಲ. ದೇಶದೆಲ್ಲೆಡೆ ಹೊಸ ಹೊಸ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ವರದಿಗಳ ಪ್ರಕಾರ ಕೆಜಿಎಫ್ 2 ಚಿತ್ರದ ನಟನೆಗಾಗಿ ಯಶ್ 25 ರಿಂದ 27 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಅವರ ಆದಾಯ ಹೆಚ್ಚಳವಾಗಿದೆ. ಅಂದಹಾಗೆ ಅವರ ಆಸ್ತಿಯ ವಿವರಗಳು ಇಂತಿವೆ:-
ನಮ್ಮ ಹಿಂದುತ್ವ ಹನುಮಂತನಷ್ಟು ಶಕ್ತಿಶಾಲಿಯಾಗಿದೆ: ಬಿಜೆಪಿಗೆ ಉದ್ಧವ್ ಠಾಕ್ರೆ ಟಾಂಗ್
1. ಬೆಂಗಳೂರಿನಲ್ಲಿ ವೈಭವೋಪೇತ ಡ್ಯುಪ್ಲೆಕ್ಸ್ ಮನೆ
ಯಶ್, ಪತ್ನಿ ರಾಧಿಕಾ ಪಂಡಿತ್ ಮತ್ತು ಅವರ ಮಕ್ಕಳು ಬೆಂಗಳೂರಿನಲ್ಲಿ ವೈಭವಯುತವಾದ ಡ್ಯುಪ್ಲೆಕ್ಸ್ ಮನೆಗೆ ತಮ್ಮ ವಾಸವನ್ನು ಸ್ಥಳಾಂತರಿಸಿಕೊಂಡಿದ್ದಾರೆ. ಇದರ ಮೌಲ್ಯ 6 ಕೋಟಿ ರೂಪಾಯಿಗಳಿಗೂ ಅಧಿಕ.
2. ಕಾರುಗಳ ಕಣಜ
ನಟ ಯಶ್ ಅವರು ಕೆಲವು ಸುಂದರವಾದ ಮತ್ತು ದುಬಾರಿ ಎನಿಸುವ ಕಾರುಗಳಿಗೆ ಒಡೆಯನಾಗಿದ್ದಾರೆ. 80 ಲಕ್ಷ ರೂಪಾಯಿಗಳ ಆಡಿ ಕ್ಯು 7, 70 ಲಕ್ಷ ರೂಪಾಯಿಗಳ ಬಿಎಂಡಬ್ಲ್ಯು 520ಡಿ ಮತ್ತು 40 ಲಕ್ಷ ರೂಪಾಯಿ ಮೌಲ್ಯದ ಪಜಾರೋ ಸ್ಪೋರ್ಟ್ಸ್, 85 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆನ್ಜ್ ಜಿಎಲ್ಎಸ್ ಮತ್ತು 60-80 ಲಕ್ಷ ರೂಪಾಯಿ ಮೌಲ್ಯದ ರೇಜ್ ರೋವರ್ ಎಲೋಕ್ ಕಾರನ್ನು ಹೊಂದಿದ್ದಾರೆ.
3. ಬ್ರ್ಯಾಂಡ್ ಅಂಬಾಸಿಡರ್
ಕೆಜಿಎಫ್ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಯಶ್ ಅವರ ಜನಪ್ರಿಯತೆ ದುಪ್ಪಟ್ಟಾಗಿ ಹಲವಾರು ಬ್ರ್ಯಾಂಡ್ ಗಳು ಅವರನ್ನು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿ ಮಾಡಿಕೊಂಡಿವೆ. ಸೆಲ್ಕೊನ್ ಮೊಬಿಲೆಸಾ, ಬಿಯಾರ್ಡೊ ನೆಸ್ಟ್ರಾನ್ ಮತ್ತು ವಿಲನ್ ಪರ್ಫ್ಯೂಮ್ ಬ್ರ್ಯಾಂಡ್ ಗೆ ರಾಯಭಾರಿಯಾಗಿದ್ದಾರೆ. ಪ್ರತಿಯೊಂದು ಬ್ರ್ಯಾಂಡ್ ಗೆ ಅವರು 60 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
4. ಚಲನಚಿತ್ರಗಳು
ಕೆಜಿಎಫ್:2 ಚಿತ್ರ ಬಿಡುಗಡೆಯಾಗುವವರೆಗೆ ಒಂದು ಚಿತ್ರಕ್ಕೆ 4-6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಈ ಚಿತ್ರಕ್ಕೆ 25 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತವೆ.