alex Certify Breaking News : ಕಲಬುರಗಿಯಲ್ಲಿ ರೈಲು ಹಳಿ ಮೇಲೆ ಬಿದ್ದ ಬಂಡೆ : ತಪ್ಪಿದ ಭಾರಿ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Breaking News : ಕಲಬುರಗಿಯಲ್ಲಿ ರೈಲು ಹಳಿ ಮೇಲೆ ಬಿದ್ದ ಬಂಡೆ : ತಪ್ಪಿದ ಭಾರಿ ದುರಂತ

ಕಲಬುರಗಿ : ಕಲಬುರಗಿಯಲ್ಲಿ ರೈಲು ( Train) ಹಳಿ ಮೇಲೆ ಬಂಡೆಯೊಂದು ಉರುಳಿ ಬಿದ್ದಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ಸುರಂಗ ಮಾರ್ಗದ ಒಳಗಿನ ರೈಲು ಹಳಿಗಳ ಮೇಲೆ ಬಂಡೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಹಿನ್ನೆಲೆ ಬೀದರ್-ಕಲಬುರಗಿ ಪ್ಯಾಸೆಂಜರ್ ರೈಲು 2 ಗಂಟೆ ನಿಂತಲ್ಲೇ ನಿಂತಿದೆ. ನಂತರ ರೈಲ್ವೆ ಸಿಬ್ಬಂದಿಗಳು ಬಂಡೆಗಳನ್ನು ತೆರವುಗೊಳಿಸಿ ರೈಲು ಸಂಚರಿಸಲು ಅನುವು ಮಾಡಿಕೊಟ್ಟರು.

ಕಳೆದ ವಾರ ಒಡಿಶಾದಲ್ಲಿ ಭೀಕರ ರೈಲು ದುರಂತ ಸಂಭವಿಸಿ 280 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಮಾಸುವ ಮುನ್ನವೇ ಹಲವು ಕಡೆ ಇಂತಹ ಘಟನೆಗಳು ಮತ್ತೆ ನಡೆಯುತ್ತಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...