ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಪಾದಗಳು ಬಿರುಕು ಬಿಡುವುದ್ರಿಂದ ನೋವು, ರಕ್ತ ಸೋರುವುದುಂಟು. ಸದಾ ಪಾದಗಳು ಸುಂದರವಾಗಿ ಕಾಣಬೇಕು, ಬಿರುಕಿನ ಸಮಸ್ಯೆ ಇರಬಾರದೆಂದ್ರೆ ಈ ಉಪಾಯವನ್ನು ಮಾಡಿ.
ಪಾದದ ಬಿರುಕು ಕಡಿಮೆಯಾಗಬೇಕೆಂದ್ರೆ ಮನೆ ಮದ್ದು ಮಾಡಬಹುದು. ಇದನ್ನು ಮಾಡುವುದು ತುಂಬ ಸುಲಭ. ಇದಕ್ಕೆ ಮೇಣದ ಬತ್ತಿ, ತೆಂಗಿನ ಎಣ್ಣೆ, ಅಲೋವೆರಾ ಜೆಲ್ ಬೇಕಾಗುತ್ತದೆ. ಮೊದಲು ಮೇಣದ ಬತ್ತಿಯನ್ನು ಕರಗಿಸಿಕೊಳ್ಳಿ. ಮೇಣದ ಎಣ್ಣೆ ಒಂದು ಕಪ್ ಆದಲ್ಲಿ ಅದಕ್ಕೆ ಒಂದುವರೆ ಕಪ್ ತೆಂಗಿನ ಎಣ್ಣೆಯನ್ನು ಹಾಕಿ. ಅದಕ್ಕೆ ಒಂದು ಕಪ್ ಅಲೋವೇರಾ ಜೆಲ್ ಹಾಕಿ.
ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ. ಅದನ್ನು ಒಲೆ ಮೇಲಿಟ್ಟು ಐದು ನಿಮಿಷ ಬಿಸಿ ಮಾಡಿ. ಒಲೆ ಆರಿಸಿದ ನಂತ್ರವೂ ಮಿಶ್ರಣವನ್ನು ಕೈ ಆಡಿಸುತ್ತಿರಿ. ರಾತ್ರಿ ಕಾಲುಗಳನ್ನು ತೊಳೆದ ನಂತ್ರ ಚರ್ಮ ಮೃದುವಾಗುತ್ತದೆ. ಸತ್ತ ಚರ್ಮವನ್ನು ಸ್ಕ್ರಬ್ ಮಾಡಿ ಕ್ಲೀನ್ ಮಾಡಿ. ನಂತ್ರ ಪಾದಗಳಿಗೆ ಈ ಮಿಶ್ರಣವನ್ನು ಹಚ್ಚಿ 15 ನಿಮಿಷ ಬಿಡಿ. ನಂತ್ರ ಕಾಲಿಗೆ ಸಾಕ್ಸ್ ಹಾಕಿಕೊಂಡು ರಾತ್ರಿ ಮಲಗಿ. ಒಂದು ವಾರಗಳ ಕಾಲ ಇದನ್ನು ಮಾಡುವುದ್ರಿಂದ ಪಾದಗಳು ಒಡೆಯುವುದು ಕಡಿಮೆಯಾಗುತ್ತದೆ.