ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಸಂಸ್ಕೃತಿಗಳ ಬೀಡು.
ಇಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಕೆಲವು ಪ್ರಸಿದ್ಧಿ ಪಡೆದಿದ್ದರೆ ಮತ್ತೆ ಕೆಲವು ಇನ್ನೂ ಪ್ರಚಾರಕ್ಕೆ ಬಂದಿಲ್ಲ. ರಜಾ ದಿನಗಳಲ್ಲಿ ವಿದೇಶ ಸುತ್ತುವ ಬದಲು ಈ ಸುಂದರ ತಾಣಗಳಲ್ಲಿ ಸ್ವಲ್ಪ ಸಮಯ ಕಳೆದ್ರೂ ಬೆಟ್ಟದಷ್ಟು ನೆಮ್ಮದಿ ಸಿಗುತ್ತದೆ.
ಭಾರತದ ಪ್ರವಾಸಿ ತಾಣಗಳಲ್ಲಿ ಮ್ಯಾಗ್ನೆಟಿಕ್ ಹಿಲ್ ಕೂಡ ಒಂದು. ಲಡಾಕ್ ನ ಈ ಮ್ಯಾಗ್ನೆಟಿಕ್ ಬೆಟ್ಟಕ್ಕೆ ಗಾಡಿಗಳು ತಾನಾಗಿಯೇ ಎಳೆಯಲ್ಪಡುತ್ತವೆ. ತಂಪಾದ ಗಾಳಿ, ನೀಲಿ ನೀರಿನ ಸರೋವರ ಮನಸ್ಸಿಗೆ ಮುದ ನೀಡುತ್ತದೆ.
ಅಸ್ಸಾಂ ರಾಜ್ಯದಲ್ಲಿರುವ ಮಜುಲಿಗೆ ಅವಶ್ಯಕವಾಗಿ ಒಮ್ಮೆ ಹೋಗಿ ಬನ್ನಿ. ಇದೊಂದು ಆಧ್ಯಾತ್ಮಿಕ ಜಾಗ. ಅಸ್ಸಾಂನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಇದೂ ಒಂದು. ನದಿಯಿಂದ ರಚಿಸಲ್ಪಟ್ಟ ವಿಶ್ವದ ದೊಡ್ಡ ದ್ವೀಪವೊಂದೇ ಅಲ್ಲ ಅಸ್ಸಾಂನ ಹೊಸ ವೈಷ್ಣವ ಸಿದ್ಧಾಂತದ ಕೇಂದ್ರವೂ ಹೌದು.
ಚಾಟ್ಪಾಲ್ ಶ್ರೀನಗರದಿಂದ 20 ಕಿಲೋಮೀಟರ್ ದೂರದಲ್ಲಿದೆ. ಹಳದಿ, ನೀಲಿ ಕಾಡು ಹೂಗಳು, ಪೈನ್ ಮರಗಳ ಸೌಂದರ್ಯ ಹಿತವೆನಿಸುತ್ತದೆ. ನೀಲಿ ಆಕಾಶ ಹಾಗೂ ಪರ್ವತಗಳ ಸೌಂದರ್ಯ ನೋಡುತ್ತಿದ್ದರೆ ಸಮಯ ಕಳೆದಿದ್ದು ತಿಳಿಯುವುದಿಲ್ಲ.