alex Certify ಛಾವಣಿ ಹಾರಿದರೂ ಗಾಢ ನಿದ್ದೆಯಲ್ಲಿದ್ದ ನೈಟ್ ​ಕ್ಲಬ್​ ಸಿಬ್ಬಂದಿ; ಪೊಲೀಸರಿಂದ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛಾವಣಿ ಹಾರಿದರೂ ಗಾಢ ನಿದ್ದೆಯಲ್ಲಿದ್ದ ನೈಟ್ ​ಕ್ಲಬ್​ ಸಿಬ್ಬಂದಿ; ಪೊಲೀಸರಿಂದ ರಕ್ಷಣೆ

ಲಂಡನ್​ನ ಲಿಂಕನ್‌ನಲ್ಲಿರುವ ನೈಟ್‌ಕ್ಲಬ್‌ನ ಕಟ್ಟಡದ ಛಾವಣಿಯ ಮೇಲೆ ಇಬ್ಬರು ಪುರುಷರು ಗಾಢ ನಿದ್ದೆಯಲ್ಲಿರುವಾಗ ಛಾವಣಿಯ ಕೆಲವು ಭಾಗ ಹಾರಿ ಹೋಗಿರುವ ದೃಶ್ಯ ಸೆರೆಯಾಗಿದೆ.

ಇಷ್ಟಾದರೂ ಗಾಢ ನಿದ್ದೆಯಲ್ಲಿ ಮಲಗಿದ್ದ ಕ್ಲಬ್​ನ ಸಿಬ್ಬಂದಿಗೆ ಮಾತ್ರ ಇದರ ಪರಿವೇ ಇಲ್ಲ.

ಆದರೆ ಪೊಲೀಸರು ಡ್ರೋನ್​ ಬಳಸಿ ಪ್ರದೇಶವನ್ನು ವೀಕ್ಷಿಸುತ್ತಿರುವಾಗ ಛಾವಣಿ ಹಾರಿರುವ ಹಾಗೂ ಈ ಸಿಬ್ಬಂದಿ ಅದರ ಪರಿವೇ ಇಲ್ಲದೇ ಮಲಗಿರುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ಹೊತ್ತಾಗಿದ್ದರೂ ಆ ವ್ಯಕ್ತಿಗಳು ಮಲಗಿದ್ದ ಸ್ಥಳವೂ ಕುಸಿದು ಅವರ ಪ್ರಾಣಕ್ಕೆ ಸಂಚಕಾರವಾಗುವ ಸಾಧ್ಯತೆ ಇತ್ತು.

ನಂತರ ಡ್ರೋನ್ ತಲೆಯ ಮೇಲೆ ಸುಳಿದಾಡುತ್ತಿದ್ದಂತೆ, ಅವರಿಗೆ ಎಚ್ಚರವಾಗಿದೆ. ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸಹಾಯದಿಂದ ಪೊಲೀಸರು ಪುರುಷರನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ್ದಾರೆ. ಆ ಛಾವಣಿ ಮೇಲೆ ಅವರು ಏರಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರಿಗೆ ಇನ್ನೂ ಸಂದೇಹವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...