ಸೌಂದರ್ಯ ಪ್ರಜ್ಞೆ ಇಲ್ಲದ ಮನುಷ್ಯನೇ ಇಲ್ಲವೇನೋ. ಎಲ್ಲರಿಗೂ ತಾನು ಸಣ್ಣ ವಯಸ್ಸಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತದೆ.
ಆರೋಗ್ಯಕರ ಲೋಟಸ್ ಸಿಡ್ಸ್, ನಟ್ಸ್ ಎಂಬ ಹೆಸರಿರುವ ಕಮಲದ ಬೀಜಗಳನ್ನು ಸಾರಿನಲ್ಲಿ ಕೆಲವರು ಬಳಸುತ್ತಾರೆ. ಈ ಬೀಜಗಳನ್ನು ಒಣಗಿಸಿ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಮುಖವಾಗಿ ಚೀನಿಯರು ಈ ಬೀಜಗಳಿಂದ ಸಾಂಪ್ರದಾಯ ಔಷಧಿಗಳನ್ನು ತಯಾರಿಸುತ್ತಾರೆ. ಈ ಬೀಜಗಳಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ ಇವುಗಳಲ್ಲಿ ಪ್ರೋಟಿನೊಂದಿಗೆ ಮೆಗ್ನಿಶಿಯಮ್, ಪೊಟ್ಯಾಸಿಯಮ್, ಪಾಸ್ಪರಸ್ ನಂತಹ ಖನಿಜಗಳು ಮತ್ತು ಐರನ್, ಜಿಂಕ್ ನಂತಹ ಲೋಹದಾತುಗಳು ಹೆಚ್ಚಾಗಿವೆ.
ಈ ಕಮಲದ ಬೀಜಗಳಲ್ಲಿ ಎಲ್ ಐ ಸೋಯಾಸ್ಪರೈ ಮಿಟೈಲ್ ಟ್ರಂಸ್ಪರೆಟ್ ಎಂಬ ಎಂಜೈಮ್ ಇದೆ. ಇದು ದೇಹದಲ್ಲಿ ಬಲಹೀನವಾದ ಕಣಜಾಲವನ್ನು ತುಂಬಾ ವೇಗವಾಗಿ ರಿಪೇರಿ ಮಾಡುತ್ತದೆ. ಆದ್ದರಿಂದ ಇವುಗಳನ್ನು ತಿನ್ನುವವರು ಬಹಳಷ್ಟು ಕಾಲ ಯೌವ್ವನದ ಹುಮ್ಮಸ್ಸನ್ನು ಹೊಂದಿರುತ್ತಾರೆ ಹಾಗೂ ಹೆಚ್ಚು ಕಾಲ ಬದುಕುತ್ತಾರೆ ಎನ್ನಲಾಗಿದೆ.
ಕಮಲದ ಬೀಜಗಳ ಈ ಗುಣದ ಕಾರಣದಿಂದ ಬಹಳಷ್ಟು ಸೌಂದರ್ಯ ವರ್ಧಕ ಕಂಪನಿಗಳು ಇದನ್ನು ಬಳಸಿಕೊಂಡಿವೆ. ಇವು ದಂತಗಳ ಆರೋಗ್ಯ ಚೆನ್ನಾಗಿರುವಂತೆಯೂ ನೋಡಿಕೊಳ್ಳುತ್ತದೆ.