ರೈಲು ಎಂಜಿನ್ ಮತ್ತು ಕೋಚ್ ನಡುವೆ ಸಿಲುಕಿ ಉದ್ಯೋಗಿ ಅಪ್ಪಚ್ಚಿ : ಭಯಾನಕ ವಿಡಿಯೋ ವೈರಲ್
ರೈಲು ಎಂಜಿನ್ ಮತ್ತು ಕೋಚ್ ನಡುವೆ ಸಿಲುಕಿ ಡಿ ಗ್ರೂಪ್ ಉದ್ಯೋಗಿ ಮೃತಪಟ್ಟ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದಿದೆ. ಘಟನೆಯ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ಜಂಕ್ಷನ್ನಲ್ಲಿ ಶನಿವಾರ ಲಕ್ನೋ-ಬರೌನಿ ಎಕ್ಸ್ಪ್ರೆಸ್ನ ಎಂಜಿನ್ ಮತ್ತು ಬೋಗಿಯನ್ನು ಬೇರ್ಪಡಿಸುವಾಗ ರೈಲ್ವೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ, ಮೃತನನ್ನು ಸಮಸ್ತಿಪುರ ಜಿಲ್ಲೆಯ ನಿವಾಸಿ ಅಮರ್ ಕುಮಾರ್ ರೌತ್ (25) ಎಂದು ಗುರುತಿಸಲಾಗಿದೆ. ರೈಲ್ವೇ ಎಂಜಿನ್ ಮತ್ತು ಕೋಚ್ ಬೇರ್ಪಡಿಸುವಾಗ ಎರಡರ ನಡುವೆ ನೌಕರ ಸಿಲುಕಿಕೊಂಡಿದ್ದಾನೆ. ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
Government should use this type of automatic coupling Train to prevent train accident 🙆♀️
The price of human life is so cheap?#TrainAccident #Bihar
“RIP Sir” “Rest in Peace”#trainaccidentnews pic.twitter.com/ySKdQVLJIu— Abiha Zaidi (@AbihaZaidi21) November 10, 2024