ಈ ರೆಸ್ಟೋರೆಂಟ್‌ಗಳೇ ಹಾಗೆ ನೋಡಿ, ಚಿತ್ರವಿಚಿತ್ರ ಥೀಂಗಳ ಮೂಲಕ ಗಿರಾಕಿಗಳನ್ನು ಸೆಳೆಯಲು ಏನೆಲ್ಲಾ ಮಾಡುತ್ತಾ ಇರುತ್ತವೆ ಎಂದು ಬೆಂಗಳೂರಿನಂಥ ಊರುಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ.
ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಬಳಿಕ ಗ್ರಾಹಕರಿಗೆ ಮುಕ್ತಗೊಳ್ಳುತ್ತಿರುವ ಬ್ರಿಟನ್‌ನ ಬಾರುಗಳು ಮತ್ತು ರೆಸ್ಟೋರೆಂಟುಗಳು ಅತಿಥಿಗಳನ್ನು ಸೀಮಿತ ಸಂಖ್ಯೆಯಲ್ಲಿ ಒಳಗೆ ಬಿಟ್ಟುಕೊಳ್ಳುತ್ತಿವೆ.
ಭಾಷಣದ ಮಧ್ಯೆಯೇ ಬಿಜೆಪಿ ಕೇಂದ್ರ ನಾಯಕರಿಗೆ ಯಡಿಯೂರಪ್ಪ ಪರೋಕ್ಷ ಟಾಂಗ್
ಇಂಗ್ಲೆಂಡ್‌ನಲ್ಲಿರುವ ಈ ರೆಸ್ಟೋರೆಂಟ್ ಒಂದು ಜೈಲಿನ ಥೀಂನಲ್ಲಿ ವಿನ್ಯಾಸಗೊಂಡಿದ್ದು, ತನ್ನಲ್ಲಿಗೆ ಬರುವ ಗ್ರಾಹಕರಿಗೆ ಜೈಲಿನ ಸೆಲ್‌ಗಳಂಥ ಜಾಗಗಳಲ್ಲಿ ಕೂರಿಸಿ, ಖೈದಿಗಳಿಗೆ ತೊಡಿಸುವ ಕಿತ್ತಳೆ ಬಣ್ಣದ ಉಡುಪಿನಲ್ಲಿ ಅವರಿಗೆ ಉಣಬಡಿಸುತ್ತಿದೆ.
ಆಲ್ಕೋಟ್ರಾಜ಼್ ಸೆಲ್ ಬ್ಲಾಕ್ ಟೂ ಒನ್ ಟೂ ಎಂದು ಕರೆಯಲಾಗುವ ಈ ಜೈಲು ರೆಸ್ಟೋರೆಂಟ್ ಲಂಡನ್‌ನ ಶೋರ್‌ಡಿಚ್‌ನಲ್ಲಿದೆ. ಒಮ್ಮೆಲೇ 50 ’ತಿಂಡಿಪ್ರಿಯ ಖೈದಿ’ಗಳನ್ನು ಹಿಡಿಸಬಲ್ಲಷ್ಟು ಜಾಗವಿರುವ ಈ ರೆಸ್ಟೋರೆಂಟ್‌ನಲ್ಲಿ ಹತ್ತು ಸೆಲ್‌ಗಳಿವೆ.
ಹೀಗೊಂದು ಬಾರಿ ’ಬಂಧಿಯಾಗಿ’ ಬರಲು £35.99 ತೆತ್ತು ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕಾದಷ್ಟು ಫೇಮಸ್ ಆಗಿಬಿಟ್ಟಿದೆ ಈ ಜೈಲು ಬಾರ್.