ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಬೆಲ್ಲದಲ್ಲಿರುತ್ತವೆ. ಹಾಗಾಗಿಯೇ ಬಹಳ ಪ್ರಾಚೀನ ಕಾಲದಿಂದಲೂ ಬೆಲ್ಲದ ಸಿಹಿಯನ್ನೇ ಸೇವಿಸಲಾಗುತ್ತಿತ್ತು. ಆದ್ರೀಗ ಚಾಕಲೇಟ್ ತಿಂದು ಬಾಯಿ ಸಿಹಿ ಮಾಡಿಸಿಕೊಳ್ಳುವವರೇ ಹೆಚ್ಚು. ವಾಸ್ತುಶಾಸ್ತ್ರದಲ್ಲೂ ಬೆಲ್ಲಕ್ಕೆ ಸಾಕಷ್ಟು ಮಹತ್ವವಿದೆ. ಯಶಸ್ಸು, ಶುಭ ಸಂದರ್ಭಗಳಲ್ಲಿ ಬೆಲ್ಲವನ್ನು ಸೇವಿಸಲಾಗುತ್ತದೆ.
ಬೆಲ್ಲದ ಕೆಲವು ಪರಿಹಾರಗಳಿಂದ ಅದೃಷ್ಟವನ್ನು ಕೂಡ ಬದಲಾಯಿಸಿಕೊಳ್ಳಬಹುದು. ಮದುವೆಯಾಗಲು ತೊಂದರೆಗಳನ್ನು ಎದುರಿಸುತ್ತಿದ್ದರೆ, ಉದ್ಯೋಗ ಸಿಗದೇ ಇದ್ದಲ್ಲಿ ಅದಕ್ಕೆ ಕೂಡ ಬೆಲ್ಲದಲ್ಲಿ ಪರಿಹಾರವಿದೆ. ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ, ಪ್ರತಿದಿನ ಸ್ವಲ್ಪ ಬೆಲ್ಲ ಮತ್ತು ನೀರನ್ನು ಸೇವಿಸುವುದರ ಮೂಲಕ ದಿನವನ್ನು ಪ್ರಾರಂಭಿಸಿ. ಈ ಭಾನುವಾರದಿಂದ ಮುಂದಿನ 8 ದಿನಗಳವರೆಗೆ 800 ಗ್ರಾಂ ಗೋಧಿ ಮತ್ತು 800 ಗ್ರಾಂ ಬೆಲ್ಲವನ್ನು ದೇವಸ್ಥಾನಕ್ಕೆ ಅರ್ಪಿಸಬೇಕು. ಇದರಿಂದ ಸೂರ್ಯನು ಬಲಶಾಲಿಯಾಗುತ್ತಾನೆ.
ಹಣಕಾಸಿನ ಸಮಸ್ಯೆಗಳಿದ್ದಲ್ಲಿ ಒಂದು ಸಣ್ಣ ತುಂಡು ಬೆಲ್ಲವನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ನಾಣ್ಯದ ಜೊತೆಗೆ ಕಟ್ಟಿಕೊಳ್ಳಿ. ನಂತರ ಅದನ್ನು ಲಕ್ಷ್ಮಿ ದೇವಿಯ ಫೋಟೋ ಎದುರು ಇರಿಸಬೇಕು. ಪ್ರತಿದಿನ ಪೂಜೆಯನ್ನು ನೆರವೇರಿಸಬೇಕು. ಐದನೇ ದಿನ ದುರ್ಗಾದೇವಿಯನ್ನು ಪೂಜಿಸಿದ ನಂತರ ಈ ಬಟ್ಟೆಯ ಗಂಟನ್ನು ಸುರಕ್ಷಿತವಾಗಿ ಬೀರುವಿನಲ್ಲಿ ಅಥವಾ ನೀವು ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ.
ನಿರಂತರವಾಗಿ ಸಾಲದ ಹೊರೆಯಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ಪರಿಹಾರವಿದೆ. ಹಳದಿ ಬಟ್ಟೆಯಲ್ಲಿ 7 ಗಂಟು ಅರಿಶಿನ ಮತ್ತು ಸ್ವಲ್ಪ ಬೆಲ್ಲವನ್ನು ಕಟ್ಟಿಕೊಳ್ಳಿ. ಇದನ್ನು ಹಣವನ್ನು ಇರಿಸುವ ಸ್ಥಳದಲ್ಲಿ ಇಡಬೇಕು. 21 ದಿನಗಳ ನಂತರ ಈ ಹಳದಿ ಬಟ್ಟೆಯಲ್ಲಿ ಕಟ್ಟಿದ ಎಲ್ಲಾ ವಸ್ತುಗಳನ್ನು ಹರಿಯುವ ನೀರಿನಲ್ಲಿ ಎಸೆಯಿರಿ. ಹೀಗೆ ಮಾಡಿದರೆ ಸಾಲದಿಂದ ಮುಕ್ತಿ ಸಿಗುತ್ತದೆ.
ಇನ್ನು ಅವಿವಾಹಿತರು ಪ್ರತಿ ಗುರುವಾರ ಗೋಧಿ ಹಿಟ್ಟಿಗೆ ಸ್ವಲ್ಪ ಬೆಲ್ಲ, ತುಪ್ಪ, ಅರಿಶಿನ ಸೇರಿಸಿ ಹಸುವಿಗೆ ತಿನ್ನಿಸಿ. ಸುಮಾರು 7 ಗುರುವಾರಗಳ ಕಾಲ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಮದುವೆ ಯೋಗ ಕೂಡಿ ಬರುತ್ತದೆ.
ಹೊಸ ಉದ್ಯೋಗದ ಹುಡುಕಾಟ ಅಥವಾ ಪ್ರಸ್ತುತ ಕೆಲಸದಲ್ಲಿ ಬಡ್ತಿಯನ್ನು ಬಯಸಿದರೆ, ಪ್ರತಿದಿನ ಮೊದಲ ರೊಟ್ಟಿಯನ್ನು ತೆಗೆದುಕೊಂಡು ಸ್ವಲ್ಪ ಬೆಲ್ಲ ಹಾಕಿ ಹಸುವಿಗೆ ತಿನ್ನಿಸಿ. ಸಂದರ್ಶನಕ್ಕೆ ಹೊರಡುವ ಸಂದರ್ಭದಲ್ಲಿ ಮನೆಯಿಂದ ಹೊರಡುವಾಗ ಹಸುವಿಗೆ ಹಿಟ್ಟು ಮತ್ತು ಬೆಲ್ಲವನ್ನು ತಿನ್ನಿಸಿದರೆ ಯಶಸ್ಸು ಸಿಗುತ್ತದೆ.