ಬೆಂಗಳೂರು : ‘ಅಮ್ಮ’ ಮಾಡಿದ ಫೋನ್ ಕರೆ ನನ್ನ ಜೀವ ಉಳಿಸಿತು..ಅಮ್ಮ ಕರೆ ಮಾಡದಿದ್ರೆ ನಾನು ಉಳಿಯುತ್ತಿರಲಿಲ್ಲ..ಎಂದು ಯುವಕನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ನಡೆದ ಬಾಂಬ್ ಸ್ಪೋಟ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ರಾಮೇಶ್ವರಂ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಬಂದ ಯುವಕನೋರ್ವ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟದಿಂದ ಬೆಂಗಳೂರು ಮೂಲದ ಎಂಜಿನಿಯರ್ ಕುಮಾರ್ ಅಲಂಕೃತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ನಾನು ಹೋಟೆಲ್ ಗೆ ದೋಸೆ ತಿನ್ನಲು ಹೋಗಿದ್ದೆ, ಅಷ್ಟರಲ್ಲಿ ಅಮ್ಮ ಫೋನ್ ಮಾಡಿದರು. ನಾನು ಮೊಬೈಲ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದೆ..ಅಷ್ಟರಲ್ಲಿ ಹೋಟೆಲ್ ನಲ್ಲಿ ಸ್ಪೋಟ ಸಂಭವಿಸಿದೆ..
ನಾನು ಕೌಂಟರ್ ನಿಂದ ದೋಸೆಯನ್ನು ತೆಗೆದುಕೊಂಡು ನನ್ನ ಕುಳಿತುಕೊಳ್ಳಲು ಹೊರಟೆ, ಅಷ್ಟರಲ್ಲಿ ಅಮ್ಮ ಫೋನ್ ಮಾಡಿದರು. ನಾನು ಸಾಮಾನ್ಯವಾಗಿ ಕುಳಿತುಕೊಳ್ಳುವ ಸ್ಥಳದಿಂದ 10 ಮೀಟರ್ ದೂರ ಹೋದೆ, ಅಷ್ಟರಲ್ಲಿ ಸ್ಫೋಟ ಸಂಭವಿಸಿದೆ, ನಾನು ಹೊರಗೆ ಓಡಿದೆ. ಇದರಿಂದ ನನಗೆ ಏನೂ ಆಗಿಲ್ಲ, ಅಮ್ಮ ಕರೆ ಮಾಡದಿದ್ರೆ ನಾನು ಬದುಕುಳಿಯುತ್ತಿರಲಿಲ್ಲ…ತಾಯಿಯೇ ದೇವರು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ.