alex Certify ಉದ್ಯೋಗದ ಹುಡುಕಾಟದಲ್ಲಿ 3 ದಿನ ಊಟವಿಲ್ಲದೆ ಉಪವಾಸವಿದ್ದ ವ್ಯಕ್ತಿಯೀಗ ನೂರಾರು ಕೋಟಿ ಆಸ್ತಿಯ ಒಡೆಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ಹುಡುಕಾಟದಲ್ಲಿ 3 ದಿನ ಊಟವಿಲ್ಲದೆ ಉಪವಾಸವಿದ್ದ ವ್ಯಕ್ತಿಯೀಗ ನೂರಾರು ಕೋಟಿ ಆಸ್ತಿಯ ಒಡೆಯ…!

ರಿಯಾಲಿಟಿ ಶೋ ʼಶಾರ್ಕ್ ಟ್ಯಾಂಕ್ ಇಂಡಿಯಾʼ ಕ್ಕೆ ಬರುವ ಸ್ಪರ್ಧಿಗಳು ಟಿವಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಾರೆ. ಅವರಲ್ಲಿ ಒಬ್ಬರಾದ ಉದ್ಯಮಿ ಅನುಪಮ್ ಮಿತ್ತಲ್ ಈಗ ಮನೆಮಾತಾಗಿದ್ದಾರೆ. ಅನುಪಮ್‌ ಅವರ ಸಾಧನೆಯ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗುವಂತಿದೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಸ್ಥಿತಿಯಲ್ಲಿದ್ದ ಅವರು ಮಿಲಿಯನೇರ್ ಆದ ಕಥೆ ನಿಜಕ್ಕೂ ಇಂಟ್ರೆಸ್ಟಿಂಗ್‌.

ಆರಂಭದಲ್ಲಿ ಅನುಪಮ್ ಮಿತ್ತಲ್, ಮುಂಬೈನಲ್ಲಿ ತಮ್ಮ ಕುಟುಂಬದೊಂದಿಗೆ ಸಣ್ಣ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಹಣಕಾಸಿನ ತೊಂದರೆ ಆಗ ಸಾಕಷ್ಟಿತ್ತು. 20 ಮಂದಿ 1000 ಚದರ ಅಡಿಯ ಮನೆಯಲ್ಲಿ ವಾಸವಾಗಿದ್ದರು. ಊಟದ ಮೇಜಿನ ಮೇಲೆ ಮತ್ತು ಕೆಳಗೆ ಮಲಗುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಅನುಮಪ್‌ ಅವರ ತಂದೆಯ ಜವಳಿ ವ್ಯವಹಾರ ಯಶಸ್ಸಿನತ್ತ ಸಾಗಿತ್ತು. ಬಳಿಕ ಅನುಪಮ್‌ ಹೆಚ್ಚಿನ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿದ್ರು.

ಅಲ್ಲಿ ಅನುಮಪ್‌ ನೌಕರಿ ಸಿಗದೇ ಸಾಕಷ್ಟು ಕಷ್ಟಪಡಬೇಕಾಯ್ತು. ಒಂದ್ಹೊತ್ತು ಊಟಕ್ಕೂ ಅವರ ಬಳಿ ಹಣವಿರಲಿಲ್ಲ. ಆದರೆ ಕುಟುಂಬದಿಂದ ಆರ್ಥಿಕ ಸಹಾಯವನ್ನು ಪಡೆಯಲು ನಿರಾಕರಿಸಿದರು. ಹಲವು ದಿನಗಳ ಕಾಲ ಊಟವಿಲ್ಲದೆ ಹಸಿವಿನಿಂದ ಬಳಲಿದ್ದರು. ಹಸಿವಿನ ಅನುಭವವು ನಮಗೆ ಬಹಳಷ್ಟು ಕಲಿಸುತ್ತದೆ ಎನ್ನುತ್ತಾರೆ ಅನುಪಮ್.‌

ಆದರೆ ಅವರು ಪ್ರಯತ್ನ ಕೈಬಿಡಲಿಲ್ಲ. ಅದೃಷ್ಟ ಹಾಗೂ ಕಠಿಣ ಪರಿಶ್ರಮದ ಫಲವಾಗಿ 20ನೇ ವಯಸ್ಸಿನಲ್ಲಿ ಅನುಪಮ್‌ ಮಿತ್ತಲ್‌ ಮಿಲಿಯನೇರ್ ಆದರು. ತಮ್ಮ ಜೀವನ ಚಕ್ರ ಹೇಗೆ ತಿರುಗಿದೆ ಎಂಬುದನ್ನು ಖುದ್ದು ಅವರಿಂದಲೇ ನಂಬಲಾಗುತ್ತಿಲ್ಲ. ಅನುಪಮ್ ಮಿತ್ತಲ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 185 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಅನುಪಮ್ ಮಿತ್ತಲ್ ಅವರು ತಮ್ಮ ಪತ್ನಿ ಅನ್ಷುಲ್‌ ಕುಮಾರ್ ಮತ್ತು ಮಗಳು ಅಲಿಶಾ ಜೊತೆಗೆ ದಕ್ಷಿಣ ಮುಂಬೈನ ಐಷಾರಾಮಿ ಕಫೆ ಪರೇಡ್ ಪ್ರದೇಶದಲ್ಲಿ ನೆಲೆಸಿದ್ದಾರೆ. 6 ಬೆಡ್‌ರೂಮ್‌ನ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಮನೆಯ ಅಲಂಕಾರವನ್ನು ನೋಡಿದರೆ ಅಲ್ಲಿನ ವೈಭವವನ್ನು ಅರ್ಥಮಾಡಿಕೊಳ್ಳಬಹುದು. ಮಿತ್ತಲ್ ಅವರ ಕಾರು ಸಂಗ್ರಹವೂ ಅದ್ಭುತವಾಗಿದೆ. Audi S5, Mercedes-Benz S-ಕ್ಲಾಸ್ ಮತ್ತು ಲ್ಯಾಂಬೋರ್ಘಿನಿ ಹುರಾಕನ್ ಕಾರುಗಳು ಅವರ ಬಳಿಯಿವೆ. ‘ಶಾರ್ಕ್ ಟ್ಯಾಂಕ್ ಇಂಡಿಯಾ’ದಲ್ಲಿ ಅನುಪಮ್ ಮಿತ್ತಲ್ ಪ್ರತಿ ಸಂಚಿಕೆಗೆ ಸುಮಾರು 7 ಲಕ್ಷ ರೂ.ಸಂಭಾವನೆ ಪಡೆಯುತ್ತಿದ್ದಾರಂತೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...