ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಒಬ್ಬ ವ್ಯಕ್ತಿ, ಕುಂಟನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದವನ ಹಣವನ್ನು ಕದ್ದಾಗ ಅನಿರೀಕ್ಷಿತ ತಿರುವು ಸಿಕ್ಕಿದೆ.
ಈ ವಿಡಿಯೋವನ್ನು ವ್ಯಾಪಾರೋದ್ಯಮಿ ಹರ್ಷ್ ಗೋಯೆಂಕಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಹಂಚಿಕೊಂಡಿದ್ದು, ಇದೀಗ ಮತ್ತೆ ವೈರಲ್ ಆಗಿದೆ. ವೀಡಿಯೋದಲ್ಲಿ, ಕಾಲುಗಳಿಗೆ ಬ್ಯಾಂಡೇಜ್ ಕಟ್ಟಿಕೊಂಡ ಒಬ್ಬ ವ್ಯಕ್ತಿ ವಿಕಲಚೇತನನಂತೆ ನಟಿಸಿ ಹಣ ಬೇಡುತ್ತಿದ್ದಾನೆ.
ಅವನ ಬಳಿಗೆ ಬಂದ ಓರ್ವ ವ್ಯಕ್ತಿ ಭಿಕ್ಷೆ ಬೇಡುತ್ತಿದ್ದವನಿಗೆ ಹಣ ಹಾಕಿದಂತೆ ನಟಿಸಿ ಬಳಿಕ ಹಣದ ಬಟ್ಟಲನ್ನು ತೆಗೆದುಕೊಂಡು ಓಡಿ ಹೋಗುತ್ತಾನೆ. ಆದರೆ ಆಶ್ಚರ್ಯವೆಂದರೆ, ವಿಕಲಚೇತನನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೂಡಲೇ ಎದ್ದು ಓಡಿಹೋದವನನ್ನು ಹಿಂಬಾಲಿಸುತ್ತಾನೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಘಟನೆಯನ್ನು ಹಾಸ್ಯವೆಂದು ಪರಿಗಣಿಸಿದರೆ, ಮತ್ತೆ ಕೆಲವರು ಇದು ಸಮಾಜದಲ್ಲಿ ನಡೆಯುತ್ತಿರುವ ಕೆಲವು ಅನೈತಿಕ ಕೃತ್ಯಗಳನ್ನು ಬಯಲು ಮಾಡುತ್ತದೆ ಎಂದು ಹೇಳಿದ್ದಾರೆ.
Miracles do happen….. pic.twitter.com/FvySTrmXh0
— Harsh Goenka (@hvgoenka) February 5, 2021