ಒಡಿಶಾದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಒಪ್ಪಿಗೆಯೊಂದಿಗೆ ಟ್ರಾನ್ಸ್ ವುಮನ್ ಮದುವೆಯಾಗಿದ್ದಾನೆ. ಒಡಿಶಾದ ಕಲಹಂಡಿ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ನಾರ್ಲಾದಲ್ಲಿರುವ ದೇವಸ್ಥಾನದಲ್ಲಿ ತನ್ನ ಪತ್ನಿಯ ಪೂರ್ವಾನುಮತಿಯೊಂದಿಗೆ ಟ್ರಾನ್ಸ್ ವುಮನ್ ವಿವಾಹವಾಗಿದ್ದಾನೆ.
ಗಂಡನ ಮದುವೆಯನ್ನು ಪತ್ನಿ ಒಪ್ಪಿಕೊಂಡಿದ್ದು, ಒಂದೇ ಮನೆಯಲ್ಲಿರುವ ಇರಲು ಕೂಡ ಒಪ್ಪಿಗೆ ನೀಡಿದ್ದಾಳೆ.
ಎರಡು ವರ್ಷದ ಮಗನ ತಂದೆಯಾಗಿರುವ ವ್ಯಕ್ತಿ ಕಳೆದ ವರ್ಷ ರಾಯಗಢ ಜಿಲ್ಲೆಯ ಅಂಬಾಡೋಲಾದಲ್ಲಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಟ್ರಾನ್ಸ್ ವುಮನ್ ಭೇಟಿಯಾಗಿದ್ದ. ಮೊದಲ ನೋಟದಲ್ಲೇ ಪ್ರೀತಿ ಬೆಳೆದು ಆಕೆಯ ಮೊಬೈಲ್ ನಂಬರ್ ತೆಗೆದುಕೊಂಡು ಸಂಪರ್ಕ ಇಟ್ಟುಕೊಂಡಿದ್ದ.
ಒಂದು ತಿಂಗಳ ಹಿಂದೆ, ಹೆಂಡತಿಗೆ ತನ್ನ ಪತಿ ಟ್ರಾನ್ಸ್ ವುಮನ್ ನೊಂದಿಗಿನ ಗಂಟೆಗಟ್ಟಲೇ ಮಾತನಾಡುತ್ತಿರುವ ಸುಳಿವು ಸಿಕ್ಕಿದೆ. ಅವನನ್ನು ಪ್ರಶ್ನಿಸಿದಾಗ, ಟ್ರಾನ್ಸ್ ವುಮನ್ ನೊಂದಿಗೆ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ, ಆಕೆಯನ್ನು ಮದುವೆಯಾಗುವುದಾಗಿ ಹೇಳಿದ್ದು, ಹೆಂಡತಿ ತನ್ನ ಕುಟುಂಬಕ್ಕೆ ಟ್ರಾನ್ಸ್ ವುಮನ್ ಸೇರಿಸಿಕೊಳ್ಳಲು ಒಪ್ಪಿಕೊಂಡಿದ್ದಾಳೆ.
ತನ್ನ ಹೆಂಡತಿಯ ಒಪ್ಪಿಗೆ ಪಡೆದ ನಂತರ, ನರ್ಲಾದಲ್ಲಿನ ದೇವಸ್ಥಾನದಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದ ಸದಸ್ಯರು ಸೇರಿದಂತೆ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವ್ಯಕ್ತಿ ಟ್ರಾನ್ಸ್ ವುಮನ್ ಮದುವೆಯಾಗಿದ್ದಾನೆ.
ಒರಿಸ್ಸಾ ಹೈಕೋರ್ಟ್‌ನ ಹಿರಿಯ ವಕೀಲ ಶ್ರೀನಿವಾಸ್ ಮೊಹಂತಿ, ಹಿಂದೂ ಕುಟುಂಬದಲ್ಲಿ ಮಹಿಳೆ ಅಥವಾ ಲಿಂಗಾಂತರಿಯೊಂದಿಗೆ ಎರಡನೇ ವಿವಾಹವನ್ನು ಭಾರತೀಯ ಕಾನೂನಿನ ಪ್ರಕಾರ ಅನುಮತಿಸಲಾಗುವುದಿಲ್ಲ. ಎರಡನೇ ಮದುವೆ ನಡೆದರೆ, ಅದು ಅನೂರ್ಜಿತವಾಗಿದೆ ಮತ್ತು ಭಾರತೀಯ ಕಾನೂನಿನ ಪ್ರಕಾರ ದಂಡದ ಕ್ರಮಕ್ಕೆ ಅರ್ಹವಾಗಿದೆ ಎಂದು ಹೇಳಿದ್ದಾರೆ.